ರಾಜಸ್ಥಾನದ ಮಹಾಜನ್ ನಲ್ಲಿ ಭಾರತ-ಯುಎಇ ಜಂಟಿ ಸಮರಾಭ್ಯಾಸಕ್ಕೆ ಚಾಲನೆ

Update: 2024-01-02 16:49 GMT

Photo: X\ @SpokespersonMoD

ಹೊಸದಿಲ್ಲಿ: ಭಾರತ ಮತ್ತು ಯುಎಇಯ ಸೇನೆಗಳು ಮಂಗಳವಾರ ರಾಜಸ್ಥಾನದ ಮಹಾಜನ್ ನಲ್ಲಿ ಮೊದಲ ಜಂಟಿ ಸಮರಾಭ್ಯಾಸಕ್ಕೆ ಚಾಲನೆ ನೀಡಿವೆ.

‘‘ಭಾರತ ಮತ್ತು ಯುಎಇ ಸೇನೆಗಳ ನಡುವಿನ ಜಂಟಿ ಸಮರಾಭ್ಯಾಸ ‘ಡೆಸರ್ಟ್ ಸೈಕ್ಲೋನ್’ ರಾಜಸ್ಥಾನದ ಮಹಾಜನ್ ನಲ್ಲಿ 2024 ಜನವರಿ 2ರಿಂದ 15ರವರೆಗೆ ನಡೆಯುತ್ತಿದೆ. ಯುಎಇಯ ಝಾಯೇದ್ ಫಸ್ಟ್ ಬ್ರಿಗೇಡ್ ನ ಸೈನಿಕರು ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ’’ ಎಂದು ಭಾರತೀಯ ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಯುಎಇ ಭೂಸೇನೆಯ 45 ಸೈನಿಕರು ಮೊದಲ ಭಾರತ-ಯುಎಇ ಜಂಟಿ ಸೇನಾಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸೇನೆ ತಿಳಿಸಿದೆ. ಜಂಟಿ ಕಣ್ಗಾವಲು ಕೇಂದ್ರ, ಮುತ್ತಿಗೆ ಮತ್ತು ಶೋಧ ಕಾರ್ಯಾಚರಣೆ, ಬಿಲ್ಟ್-ಅಪ್ ಏರಿಯದ ಮೇಲೆ ಪ್ರಾಬಲ್ಯ ಸಾಧಿಸುವುದು ಮತ್ತು ಹೆಲಿಕಾಪ್ಟರ್ ಕಾರ್ಯಾಚರಣೆ- ಇವುಗಳು ಜಂಟಿ ಸಮರಾಭ್ಯಾಸದಲ್ಲಿ ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News