ಭಾರತೀಯ ನೌಕಾಪಡೆಯಿಂದ ʼಮಲ್ಪೆʼ, ʼಮುಲ್ಕಿʼ ಹೆಸರಿನ ಎರಡು ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆಗಳಿಗೆ ಚಾಲನೆ

Update: 2024-09-11 11:12 IST
ಭಾರತೀಯ ನೌಕಾಪಡೆಯಿಂದ ʼಮಲ್ಪೆʼ, ʼಮುಲ್ಕಿʼ ಹೆಸರಿನ ಎರಡು ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆಗಳಿಗೆ ಚಾಲನೆ

Photo:X/@cslcochin

  • whatsapp icon

ಕೊಚ್ಚಿ: ಭಾರತೀಯ ನೌಕಾಪಡೆಯ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಲ್ಲಿ ಮಲ್ಪೆ ಮತ್ತು ಮುಲ್ಕಿ ಎಂಬ ಹೆಸರಿನ ಎರಡು ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆಗಳಿಗೆ ಚಾಲನೆ ನೀಡಿದೆ.

ಇವು 8 ಜಲಾಂತರ್ಗಾಮಿ ವಿರೋಧಿ ʼಯುದ್ಧ ನೌಕೆʼಗಳ ನಿರ್ಮಾಣ ಯೋಜನೆಯ ಭಾಗವಾಗಿದ್ದು, ಈ ಯೋಜನೆಯಡಿಯಲ್ಲಿ ಪ್ರಾರಂಭಿಸಲಾದ 4ನೇ ಮತ್ತು 5ನೇ ಯುದ್ಧ ನೌಕೆಗಳಾಗಿವೆ. ಈ ಬಗ್ಗೆ 2019ರ ಎ. 30ರಂದು ಭಾರತೀಯ ರಕ್ಷಣಾ ಸಚಿವಾಲಯ ಮತ್ತು ಸಿಎಸ್‌ಎಲ್ ನಡುವೆ ಒಪ್ಪಂದ ನಡೆದಿತ್ತು.

ರಕ್ಷಣಾ ಸಚಿವಾಲಯವು ಯುದ್ಧ ನೌಕೆಗೆ ಚಾಲನೆ ನೀಡಿರುವುದನ್ನು ದೃಢಪಡಿಸಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸುತ್ತಿರುವ 8 ಜಲಾಂತರ್ಗಾಮಿ ವಿರೋಧಿ ʼಯುದ್ಧ ನೌಕೆʼ ಯೋಜನೆಯ ನಾಲ್ಕನೇ ಮತ್ತು ಐದನೇ ಹಡಗುಗಳಾದ ಮಲ್ಪೆ ಮತ್ತು ಮುಲ್ಕಿಯನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದೆ.

ಈ ಯೋಜನೆಯು ಭಾರತದ 'ಆತ್ಮನಿರ್ಭರ್ ಭಾರತ್' ಉಪಕ್ರಮದ ಭಾಗವಾಗಿದೆ. ಇದು ವಿದೇಶಿದಿಂದ ರಕ್ಷಣಾ ಸಾಮಾಗ್ರಿಗಳ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಹಡಗುಗಳ ನಿರ್ಮಾಣದಲ್ಲಿ 80% ಕ್ಕಿಂತ ಹೆಚ್ಚು ಸ್ಥಳೀಯ ಸಾಮಾಗ್ರಿಗಳನ್ನು ಬಳಸಲಾಗಿದೆ. ಇದು ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಮೈಲಿಗಲ್ಲನ್ನು ತೋರಿಸುತ್ತದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

ಸ್ಥಳೀಯವಾಗಿ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಯು ಸ್ವಾವಲಂಬನೆಗೆ ಕೊಡುಗೆ ನೀಡುವುದಲ್ಲದೆ ರಕ್ಷಣಾ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ. ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News