ಗಾಝಾ ಮೇಲಿನ ಅನಿಯಂತ್ರಿತ ದಾಳಿ ನರಮೇಧ ಯತ್ನಕ್ಕೆ ಸಮನಾಗಿದೆ: ಫೆಲೆಸ್ತೀನಿ ರಾಯಭಾರಿ ಭೇಟಿ ನಂತರ ವಿಪಕ್ಷ ನಾಯಕರ ಹೇಳಿಕೆ

Update: 2023-10-17 09:48 GMT

ಮಣಿಶಂಕರ್‌ ಅಯ್ಯರ್‌, ಮನೋಜ್‌ ಝಾ (PTI)

ಹೊಸದಿಲ್ಲಿ: ರಾಜಧಾನಿಯಲ್ಲಿ ಫೆಲೆಸ್ತೀನಿ ರಾಯಭಾರಿಯನ್ನು ಭೇಟಿಯಾದ ಮಣಿಶಂಕರ್‌ ಅಯ್ಯರ್‌, ಮನೋಜ್‌ ಝಾ, ಕೆ ಸಿ ತ್ಯಾಗಿ ಮತ್ತಿತರ ಪ್ರಮುಖ ವಿಪಕ್ಷ ನಾಯಕರು ನಂತರ ಜಂಟಿ ಹೇಳಿಕೆ ಬಿಡುಗಡೆಗೊಳಿಸಿ, ಇಸ್ರೇಲಿ-ಫೆಲೆಸ್ತೀನಿ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಬೇಕು ಹಾಗೂ ಇಸ್ರೇಲ್‌ ದಾಳಿಯಿಂದ ಗಾಝಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಸನ್ನಿವೇಶ ಹಾಗೂ ಅಪಾರ ಸಾವು ನೋವುಗಳನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಪ್ರದೇಶದಲ್ಲಿ ದೀರ್ಘಕಾಲಿಕ ಶಾಂತಿಗಾಗಿ ರಾಜತಾಂತ್ರಿಕ ಮತ್ತು ದ್ವಿಪಕ್ಷೀಯ ಮಾತುಕತೆಗಳು ನಡೆಯಬೇಕಿದೆ ಎಂದು ಹೇಳಿಕೆ ತಿಳಿಸಿದೆ. ಗಾಝಾದ ಮೇಲೆ ಇಸ್ರೇಲ್‌ನ ಅನಿಯಂತ್ರಿತ ದಾಳಿಯನ್ನು ಖಂಡಿಸಿದ ಹೇಳಿಕೆ ಇದು ನರಮೇಧದ ಯತ್ನ. ಅಲ್ಲಿನ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಸರ್ವ ರೀತಿಯಲ್ಲೂ ಕ್ರಮಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News