ಸರಕಾರದಿಂದ ಫಾರ್ಮಾ ಕಂಪೆನಿಗಳ ತಪಾಸಣೆ ಆಕ್ಷೇಪಿಸಿ ಕೇಂದ್ರಕ್ಕೆ ಪತ್ರ ಬರೆದ ಆರೆಸ್ಸೆಸ್‌ ಬೆಂಬಲಿತ ಸಂಸ್ಥೆ

“ರಿಸ್ಕ್‌ ಬೇಸ್ಡ್‌ ಇನ್‌ಸ್ಪೆಕ್ಷನ್ಸ್-‌ ಎ ಡೆತ್‌ ಸೆಂಟೆನ್ಸ್‌ ಫಾರ್‌ ಎಂಎಸ್‌ಎಂಇ ಫಾರ್ಮಾ ಮ್ಯಾನುಫ್ಯಾಕ್ಚರರ್ಸ್‌ ಇನ್‌ ಇಂಡಿಯಾ” ಎಂಬ ಶೀರ್ಷಿಕೆಯ ಈ ಪತ್ರವನ್ನು ಸಚಿವಾಲಯಕ್ಕೆ ಕಳೆದ ತಿಂಗಳು ಕಳುಹಿಸಲಾಗಿತ್ತು ಹಾಗೂ ಪತ್ರಕ್ಕೆ ಲಘು ಉದ್ಯೋಗ್‌ ಭಾರತಿ ಅಧ್ಯಕ್ಷ ಸಂಜಯ್‌ ಕುಮಾರ್‌ ಸಹಿ ಹಾಕಿದ್ದರು.

Update: 2023-07-07 07:20 GMT
Editor : Muad | Byline : ವಾರ್ತಾಭಾರತಿ

ಫೋಟೋ: KNN India

ಹೊಸದಿಲ್ಲಿ: ದೇಶಾದ್ಯಂತ 300ಕ್ಕೂ ಅಧಿಕ ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳನ್ನು ಪ್ರತಿನಿಧಿಸುವ ಲಘು ಉದ್ಯೋಗ್‌ ಭಾರತಿ ಎಂಬ ಆರೆಸ್ಸೆಸ್‌ ಬೆಂಬಲಿತ ಸಂಸ್ಥೆಯು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಇತ್ತೀಚೆಗೆ ಪತ್ರ ಬರೆದು ಸರಕಾರವು ಫಾರ್ಮಾ ಕಂಪೆನಿಗಳಲ್ಲಿ ನಡೆಸುವ ಅಪಾಯ-ಆಧಾರಿತ ತಪಾಸಣೆಯು ತುಂಬಾ ಕಠೋರವಾಗಿರುವ ಜೊತೆಗೆ ಫಾರ್ಮಾ ಕೈಗಾರಿಕೆಯನ್ನು ನಿರುತ್ತೇಜಿಸುತ್ತದೆ ಎಂದು ಹೇಳಿದೆ.

ಅಷ್ಟೇ ಅಲ್ಲದೆ ಈ ತಪಾಸಣೆಗಳು ಭಾರತೀಯ ಫಾರ್ಮಾ ಸಂಸ್ಥೆಗಳಿಗೆ ಕೆಟ್ಟ ಹೆಸರು ತರುತ್ತವೆ, ಇಂತಹ ತಪಾಸಣೆಗಳನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸಂಪೂರ್ಣ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು ಎಂದು ಪತ್ರ ಹೇಳಿದೆ.

“ರಿಸ್ಕ್‌ ಬೇಸ್ಡ್‌ ಇನ್‌ಸ್ಪೆಕ್ಷನ್ಸ್-‌ ಎ ಡೆತ್‌ ಸೆಂಟೆನ್ಸ್‌ ಫಾರ್‌ ಎಂಎಸ್‌ಎಂಇ ಫಾರ್ಮಾ ಮ್ಯಾನುಫ್ಯಾಕ್ಚರರ್ಸ್‌ ಇನ್‌ ಇಂಡಿಯಾ” ಎಂಬ ಶೀರ್ಷಿಕೆಯ ಈ ಪತ್ರವನ್ನು ಸಚಿವಾಲಯಕ್ಕೆ ಕಳೆದ ತಿಂಗಳು ಕಳುಹಿಸಲಾಗಿತ್ತು ಹಾಗೂ ಪತ್ರಕ್ಕೆ ಲಘು ಉದ್ಯೋಗ್‌ ಭಾರತಿ ಅಧ್ಯಕ್ಷ ಸಂಜಯ್‌ ಕುಮಾರ್‌ ಸಹಿ ಹಾಕಿದ್ದರು.

ಆದರೆ ಈ ಪತ್ರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್‌, ಅದನ್ನು ತಪ್ಪಾಗಿ ಕಳುಹಿಸಲಾಗಿತ್ತು ಮತ್ತು ಸ್ಪಷ್ಟೀಕರಣ ನೀಡಲಾಗಿದೆ. ಇದನ್ನು ಸಚಿವಾಲಕ್ಕೆ ಕಳುಹಿಸುವ ಉದ್ದೇಶವಿರಲಿಲ್ಲ, ಬದಲು ಆಂತರಿಕ ಸಭೆಯಲ್ಲಿ ಚರ್ಚೆಯ ವಿಷಯವಾಗಿತ್ತು, ಈ ಪತ್ರದಲ್ಲಿನ ವಿಷಯ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಅಭಿಪ್ರಾಯ ಎಂದು ಪರಿಗಣಿಸಬಾರದು, ಏಕೆಂದರೆ ಅದನ್ನು ಇನ್ನಷ್ಟೇ ಎಲ್ಲರ ಜೊತೆಗೆ ಚರ್ಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಈ ವರ್ಷ ಕೇಂದ್ರ ಆರೋಗ್ಯ ಸಚಿವಾಲಯ ಇಲ್ಲಿಯ ತನಕ 100ಕ್ಕೂ ಅಧಿಕ ಫಾರ್ಮಾ ಕಂಪೆನಿಗಳಲ್ಲಿ ತಪಾಸಣೆ ನಡೆಸಿ ಕಡಿಮೆ ಗುಣಮಟ್ಟದ ಹಾಗೂ ನಕಲಿ ಔಷಧಿ ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿದೆ ಹಾಗೂ 18ಕ್ಕೂ ಅಧಿಕ ಕಂಪೆನಿಗಳ ಪರಾವನಗಿಯನ್ನು ರದ್ದುಗೊಳಿಸಲಾಗಿದ್ದರೆ ಕಳಪೆ ಗುಣಮಟ್ಟದ ಔಷಧಿ ಎಂಬ ಕಾರಣಕ್ಕೆ ಕೆಲ ಸಂಸ್ಥೆಗಳಿಗೆ ಉತ್ಪಾದನೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ.

ಹೆಚ್ಚಿನ ಸಂಸ್ಥೆಗಳು ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮತ್ತು ಉತ್ತರಾಖಂಡದಲ್ಲಿವೆ.

ಆರೋಗ್ಯ ಸಚಿವಾಲಯದ ಕಾರ್ಯಾಚರಣೆಯು ಸರಕಾರಿ ಲ್ಯಾಬ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲದ ಔಷಧಿಗಳು ಎಂದು ಗುರುತಿಸಿದ ಔಷಧಿಗಳ ಆಧಾರದಲ್ಲಿ ನಡೆಯುತ್ತಿವೆ ಆದರೆ ಈ ಕಾರ್ಯಾಚರಣೆಗೆ ಕಂಪೆನಿಗಳನ್ನು ಆಯ್ಕೆಮಾಡುವ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ಪತ್ರ ಹೇಳಿದೆ.

ಈ ಕಾರ್ಯಾಚರಣೆಯು ಭಾರತೀಯ ಫಾರ್ಮಾ ಕಂಪೆನಿಗಳಿಗೆ ಕೆಟ್ಟ ಹೆಸರು ತಂದಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಜಗತ್ತಿನ ಫಾರ್ಮಸಿ ಎಂದು ಖ್ಯಾತಿ ಪಡೆದಿರುವ ಭಾರತದಲ್ಲಿ ಕೈಗೆಟಕುವ ದರದ ಔಷಧಿಗಳು ತಯಾರಾಗುತ್ತಿರುವಂತಹ ಸಂದರ್ಭದಲ್ಲಿ ತಪ್ಪುಗಳನ್ನು ಹುಡುಕುವ ಉದ್ದೇಶದ ಈ ರೀತಿಯ ಕಾರ್ಯಾಚರಣೆಗಳು ಸಂಪೂರ್ಣ ಔಷಧಿ ತಯಾರಿಕಾ ಕೈಗಾರಿಕಾ ಕ್ಷೇತ್ರವನ್ನು ಬೆದರಿಸಿದಂತಾಗಿದೆ ಎಂದು ಪತ್ರ ಹೇಳಿದೆ.

ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ತನಕ ಈ ಕಾರ್ಯಾಚರನೇಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಪತ್ರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News