ಗಾಝಾದಲ್ಲಿನ ಫೆಲೆಸ್ತೀನ್ ವಿವಿ ಕಟ್ಟಡದ ಮೇಲೆ ಇಸ್ರೇಲ್ ಬಾಂಬ್ ದಾಳಿ?; ವೀಡಿಯೋ ವೈರಲ್
ವಾಷಿಂಗ್ಟನ್: ಗಾಝಾದಲ್ಲಿನ ಫೆಲೆಸ್ತೀನ್ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಡ್ ಕಟ್ಟಡದ ಮೇಲೆ ಇಸ್ರೇಲಿ ಮಿಲಿಟರಿ (ಐಡಿಎಫ್) ದಾಳಿ ನಡೆಸಿದೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಇಸ್ರೇಲ್ ಸರಕಾರದಿಂದ ಅಮೆರಿಕ ಸ್ಪಷ್ಟೀಕರಣವನ್ನು ಕೇಳಿದೆ.
ವಿವಿ ಕಟ್ಟಡದಂತೆ ತೋರುವ ಕಟ್ಟಡವೊಂದು ಬಾಂಬ್ ದಾಳಿಯಿಂದ ಸ್ಫೋಟಗೊಳ್ಳುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ಈ ವೀಡಿಯೋ ಕುರಿತಂತೆ ಅಮೆರಿಕಾ ಸರ್ಕಾರದ ವಕ್ತಾರ ಡೇವಿಡ್ ಮಿಲ್ಲರ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಹಾಗೂ ಈ ಕುರಿತು ಸಾಕಷ್ಟು ಮಾಹಿತಿ ತಮ್ಮ ಬಳಿ ಇಲ್ಲವೆಂದು ಹೇಳಿದ್ದಾರೆ.
ಕಟ್ಟಡವು ಹಮಾಸ್ ಸದಸ್ಯರು ಮತ್ತು ಮುಖಂಡರ್ ಭದ್ರಕೋಟೆ ಎಂದು ಅದನ್ನು ಇಸ್ರೇಲಿ ಮಿಲಿಟರಿ ಗುರಿಯಾಗಿಸಿದೆ ಎಂದು ದಕ್ಷಿಣ ಗಾಝಾದ ಮುಖ್ಯ ಪ್ರದೇಶವಾಗಿರುವ ಖಾನ್ ಯೂನಿಸ್‌ನಲ್ಲಿನ ಪ್ರತ್ಯಕ್ಷದರ್ಶಿ ಸಾಕ್ಷಿಗಳು ಹೇಳಿದ್ದಾರೆ.
ಗಾಝಾದ ಅಲ್-ಅಮಲ್ ಆಸ್ಪತ್ರೆ ಸಮೀಪವೂ ದಾಳಿ ನಡೆದಿದ್ದು ಈ ದಾಳಿಯಲ್ಲಿ 77 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ.
Birzeit University condemns the brutal assault and bombing of @Al-Israa University campus by the Israeli occupation south of #Gaza city, this occurred after seventy days of the occupation occupying the campus; turning it into their base, and military barracks for their forces pic.twitter.com/vot9s1z3tz
— Birzeit University (@BirzeitU) January 18, 2024