ಸೂರ್ಯಶಿಕಾರಿಗೆ ಇಸ್ರೋ ಕ್ಷಣಗಣನೆ ಆರಂಭ ; ನಾಳೆ ಆದಿತ್ಯ ಎಲ್1 ಉಡಾವಣೆ

Update: 2023-09-01 17:10 GMT

'ಆದಿತ್ಯಎಲ್'-1 | Photo: twitter \ @isro

ಶ್ರೀಹರಿಕೋಟಾ: ಭಾರತದ ಚೊಚ್ಚಲ ಸೌರ ಯಾನ ‘ಆದಿತ್ಯಎಲ್1’ನ ಉಡಾವಣೆಗೆ ಕ್ಷಣಗಣನೆ ಶುಕ್ರವಾರ ಆರಂಭಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ.

ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶಕೇಂದ್ರದಲ್ಲಿ ಶನಿವಾರ ಬೆಳಗ್ಗೆ 11:50ರ ವೇಳೆಗೆ ಆದಿತ್ಯಎಲ್1 ನೌಕೆಯನ್ನು ಹೊತ್ತ ಪಿಎಸ್ಎಲ್ವಿ-ಸಿ57 ರಾಕೆಟ್ ಉಡಾವಣೆಗೊಳ್ಳಲಿದೆ. ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಆದಿತ್ಯಎಲ್1 ಉಡಾವಣೆಗೆ ಇಸ್ರೋ ಸಜ್ಜಾಗಿರುವುದು ವಿಶೇಷವಾಗಿದೆ.

‘‘ಪಿಎಸ್ಎಲ್ವಿ-ಸಿ57/ ಆದಿತ್ಯ ಎಲ್1 ಮಿಶನ್: 2023ರ ಸೆಪ್ಟೆಂಬರ್ 2ರಂದು ಬೆಳಗ್ಗೆ 11:50ಕ್ಕೆ ನಡೆಯಲಿರುವ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ’’ ಎಂದು ಇಸ್ರೋ ‘ಎಕ್ಸ್’ನಲ್ಲಿ (ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿದೆ.

23 ತಾಸು 40 ನಿಮಿಷಗಳ ಕ್ಷಣಗಣನೆಯ ಶುಕ್ರವಾರ ಮಧ್ಯಾಹ್ನ 12:10ಕ್ಕೆ ಆರಂಭಗೊಂಡಿತು. ಸೂರ್ಯನ ನಿಖರವಾದ ತ್ರಿಜ್ಯ (ರೇಡಿಯಸ್)ವನ್ನು ತಲುಪಲು ಆದಿತ್ಯಎಲ್1ಗೆ 125 ದಿನಗಳು ಬೇಕಾಗುತ್ತವೆ ಎಂದು ಇಸ್ರೋ ವರಿಷ್ಠ ಎಸ್.ಸೋಮನಾಥ್ ಈ ಮೊದಲು ತಿಳಿಸಿದ್ದರು.

ಆದಿತ್ಯ ಎಲ್1 ನೌಕೆಯು ಸೂರ್ಯನ ಪ್ರಭಾವಲಯ (ಕೊರೋನಾ)ದ ಹಾಗೂ ಭೂಮಿಯಿಂದ 1.5 ದಶಲಕ್ಷ ಕಿಲೋ ಮೀಟರ್ ದೂರದಲ್ಲಿರುವ ಸೌರ ಮಾರುತದ ಅಧ್ಯಯನಗಳನ್ನು ನಡೆಯಲಿದೆ.

ಸೂರ್ಯನ ಅಧ್ಯಯನಕ್ಕಾಗಿ ಭಾರತವು ನಡೆಸಲಿರುವ ಚೊಚ್ಚಲ ಬಾಹ್ಯಾಕಾಶ ಮಿಶನ್ ಇದಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News