ಜೆ ಎನ್‌ ಯು ಕ್ಯಾಂಪಸ್ ನಲ್ಲಿ ಪ್ರತಿಭಟನೆಗೆ ನಿಷೇಧ

Update: 2023-12-11 18:15 GMT

ಹೊಸದಿಲ್ಲಿ: ಇಲ್ಲಿಯ ಜವಾಹರಲಾಲ ನೆಹರು ವಿವಿ (ಜೆ ಎನ್‌ ಯು)ಯು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಶೈಕ್ಷಣಿಕ ಕಟ್ಟಡಗಳ 100 ಮೀ.ವ್ಯಾಪ್ತಿಯೊಳಗೆ ಭಿತ್ತಿಪತ್ರಗಳನ್ನು ಅಂಟಿಸುವುದು, ಧರಣಿ ಅಥವಾ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಿದೆ.

ನಿಯಮಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳಿಗೆ 20,000 ರೂ.ವರೆಗೆ ದಂಡವನ್ನು ವಿಧಿಸಬಹುದು ಅಥವಾ ಅವರನ್ನು ಉಚ್ಚಾಟಿಸಬಹುದು. ಈ ಮೊದಲು ಆಡಳಿತಾತ್ಮಕ ಕಟ್ಟಡಗಳ ನೂರು ಮೀ.ವ್ಯಾಪ್ತಿಯೊಳಗೆ ಪ್ರತಿಭಟನೆಗಳನ್ನು ನಿಷೇಧಿಸಲಾಗಿತ್ತು.

ಪರಿಷ್ಕೃತ ನಿಯಮಗಳನ್ನು ವಿರೋಧಿಸಿರುವ ಜೆ ಎನ್‌ ಯು ವಿದ್ಯಾರ್ಥಿಗಳ ಸಂಘವು, ಇದು ಕ್ಯಾಂಪಸ್ ಸಂಸ್ಕೃತಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News