ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಸರಕಾರದಿಂದ ‘‘ಜಂಗಲ್ ರಾಜ್ ಗ್ಯಾರಂಟಿ’’: ರಾಹುಲ್ ಗಾಂಧಿ

Update: 2024-03-01 15:45 GMT

ರಾಹುಲ್ ಗಾಂಧಿ | Photo: ANI 

ಹೊಸದಿಲ್ಲಿ : ಉತ್ತರಪ್ರದೇಶದಲ್ಲಿ ಡಬಲ್ ಎಂಜಿನ್ ಸರಕಾರದಿಂದ ‘‘ಜಂಗಲ್ ರಾಜ್ ಗ್ಯಾರಂಟಿ’’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿರುವ ವಿರುದ್ಧ ಕಾರ್ಯಕರ್ತರಿಂದ ರಾಜ್ಯವ್ಯಾಪಿ ಪ್ರತಿಭಟನೆ ಘೋಷಿಸಿದ ಸಂದರ್ಭ ಅವರು ಈ ಹೇಳಿಕೆ ನೀಡಿದರು.

ಬಿಜೆಪಿ ಹಾಗೂ ಮೋದಿ ಮಾಧ್ಯಮಗಳು ಸಂಘಟಿತವಾಗಿ ‘‘ಸುಳ್ಳುಗಳ ಉದ್ಯಮ’’ದಲ್ಲಿ ಹೇಗೆ ತೊಡಗಿಕೊಂಡಿವೆ ಎಂಬುದಕ್ಕೆ ಉತ್ತರಪ್ರದೇಶದ ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿ ಅತಿ ದೊಡ್ಡ ಉದಾಹರಣೆ’’ ಎಂದು ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.

ಮಹಿಳೆಯರ ವಿರುದ್ಧದ ಇತ್ತೀಚೆಗಿನ ಹಲವು ಅಪರಾಧ ಪ್ರಕರಣಗಳ ಕುರಿತು ಗಮನ ಸೆಳೆದ ಅವರು, ಕೆಲವು ಪ್ರದೇಶಗಳಲ್ಲಿ ಅಪ್ರಾಪ್ತ ಸಹೋದರಿಯರ ಮೃತದೇಹಗಳು ಮರಗಳಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ ಎಂದರು.

ಎಲ್ಲೋ ಐಐಟಿ-ಬಿಎಚ್ಯು ಕ್ಯಾಂಪಸ್ನಲ್ಲಿ ಬಿಜೆಪಿ ಸದಸ್ಯರಿಂದ ಸಾಮೂಹಿಕ ಅತ್ಯಾಚಾರ ಹಾಗೂ ಎಲ್ಲೋ ನ್ಯಾಯ ಸಿಗದೇ ಇರುವುದಕ್ಕೆ ಮಹಿಳಾ ನ್ಯಾಯಮೂರ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗುತ್ತಿರುವುದು, ಇದು ಕಾನೂನು ಹಾಗೂ ಸುವ್ಯವಸ್ಥೆಯನ್ನು ಹೊಗಳುತ್ತಿರುವ ರಾಜ್ಯದ ಪರಿಸ್ಥಿತಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಅವರು ಇತ್ತೀಚೆಗೆ ರಾಮ್ಪುರದಲ್ಲಿ 10ನೇ ತರಗತಿ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ದಲಿತ ವಿದ್ಯಾರ್ಥಿಯನ್ನು ಹತ್ಯೆಗೈದಿರುವುದನ್ನು ಉಲ್ಲೇಖಿಸಿದರು.

ಮೋದಿ ಮಾಧ್ಯಮ ಸೃಷ್ಟಿಸಿದ ಸುಳ್ಳಿನಿಂದ ಹೊರಬರಲು ಹಾಗೂ ಡಬಲ್ ಎಂಜಿನ್ ಸರಕಾರದಿಂದ ‘‘ಜಂಗಲ್ ರಾಜ್’’ ಗ್ಯಾರಂಟಿ ಎಂಬ ಸತ್ಯ ಅರಿಯಲು ಇದು ಸಕಾಲವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಮಾರ್ಚ್ 10ರಂದು ಮಹಾರಾಷ್ಟ್ರ ಪ್ರವೇಶಿಸಲಿರುವ ‘ಭಾರತ್ ಜೋಡೊ ನ್ಯಾಯ ಯಾತ್ರೆ’ (ವಾ)

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘‘ಭಾರತ್ ಜೋಡೊ ನ್ಯಾಯ ಯಾತ್ರೆ’’ ಗುಜರಾತ್ನಿಂದ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಗೆ ಮಾರ್ಚ್ 10ರಂದು ತಲುಪಲಿದೆ ಎಂದು ಕಾಂಗ್ರೆಸ್ನ ಸ್ಥಳೀಯ ಪದಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಯಾತ್ರೆ ನಂದುರ್ಬಾರ್ನಿಂದ ಧುಲೆ, ಮಾಲೇಗಾಂವ್ ಹಾಗೂ ನಾಸಿಕ್ ಮೂಲಕ ಸಾಗಲಿದ್ದು, ಅಲ್ಲಿ ರಾಮನಿಗೆ ಸಮರ್ಪಿತವಾದ ಕಾಲಾರಾಮ್ ದೇವಾಲಯ ಹಾಗೂ ಶಿವನಿಗೆ ಸಮರ್ಪಿತವಾದ ತ್ರಯಂಬಕೇಶ್ವರ ದೇವಾಲಯಗಳಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News