ಕೇಜ್ರಿವಾಲ್ ಪರ ವಾಟ್ಸ್ ಆ್ಯಪ್ ಅಭಿಯಾನ ಆರಂಭಿಸಿದ ಪತ್ನಿ ಸುನಿತಾ

Update: 2024-03-29 17:01 GMT

ಸುನಿತಾ ಕೇಜ್ರಿವಾಲ್ | Photo: PTI 

ಲಕ್ನೊ: ಮಾರ್ಚ್ 21ರಿಂದ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ತನ್ನ ಪತಿಯನ್ನು ಬೆಂಬಲಿಸುವ ಉದ್ದೇಶದಿಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ವಾಟ್ಸ್ ಆ್ಯಪ್ ಅಭಿಯಾನ ಆರಂಭಿಸಿದ್ದಾರೆ.

ನಾವು ಇದು ‘ಕೇಜ್ರಿವಾಲ್‌ಕೋ ಆಶೀರ್ವಾದ್’ ಅನ್ನು ಆರಂಭಿಸುತ್ತಿದ್ದೇವೆ. ನೀವು ನಿಮ್ಮ ಆಶೀರ್ವಾದ ಹಾಗೂ ಪ್ರಾರ್ಥನೆಯನ್ನು ಕೇಜ್ರಿವಾಲ್ ಅವರ ಈ ಸಂಖ್ಯೆಗೆ ಕಳುಹಿಸಬಹುದು ಎಂದು ಅಭಿಯಾನವನ್ನು ಆರಂಭಿಸಿ ಸುನಿತಾ ಕೇಜ್ರಿವಾಲ್ ಹೇಳಿದರು.

‘‘ನನ್ನ ಪತಿ ನಿಜವಾದ ದೇಶ ಭಕ್ತ. ನ್ಯಾಯಾಲಯದಲ್ಲಿ ಅವರು ತಮ್ಮ ನಿಲುವು ಧೈರ್ಯವಾಗಿ ಅಭಿವ್ಯಕ್ತಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ರಾಷ್ಟ್ರದೊಳಗೆ ನನ್ನ ಪತಿ ಹೆಚ್ಚು ಭ್ರಷ್ಟ ಹಾಗೂ ಸರ್ವಾಧಿಕಾರಿ ಶಕ್ತಿಗಳನ್ನು ಎದುರಿಸಿದ್ದಾರೆ ಎಂದು ಸುನಿತಾ ಕೇಜ್ರಿವಾಲ್ ಅವರು ಹೇಳಿದ್ದಾರೆ. ಅಲ್ಲದೆ, ಆಶೀರ್ವಾದ ಹಾಗೂ ಪ್ರಾರ್ಥನೆ ಮೂಲಕ ಕೇಜ್ರಿವಾಲ್ ಅವರನ್ನು ಬೆಂಬಲಿಸುವಂತೆ ಅವರು ಜನರನ್ನು ಆಗ್ರಹಿಸಿದ್ದಾರೆ.

‘‘ತಾನು ಜೈಲಿನ ಒಳಗೆ ಇರಲಿ ಅಥವಾ ಹೊರಗೆ ಇರಲಿ. ನನ್ನ ಬದುಕಿನ ಪ್ರತಿಕ್ಷಣವನ್ನು ದೇಶದ ಸೇವೆಗೆ ಮುಡಿಪಾಗಿಡುತ್ತೇನೆ. ನನ್ನ ರಕ್ತದ ಪ್ರತಿ ಹನಿಯನ್ನು ದೇಶಕ್ಕೆ ಅರ್ಪಿಸುತ್ತೇನೆ’’ ಎಂದು ಕೇಜ್ರಿವಾಲ್ ಹೇಳಿರುವುದನ್ನು ಅವರು ಪುನರುಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News