ವಯನಾಡ್ ಭೂಕುಸಿತ | ಸಂತ್ರಸ್ತರ ಸಾಲ ಮನ್ನಾ ಮಾಡಲು ನಿರ್ಧರಿಸಿದ ಕೇರಳ ಬ್ಯಾಂಕ್
Update: 2024-08-12 13:09 GMT
ತಿರುವನಂತಪುರಂ: ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ದುರಂತದ ನಂತರ, ಜಿಲ್ಲಾ ಸಹಕಾರಿ ಬ್ಯಾಂಕ್ ಗಳ ಒಕ್ಕೂಟ ಕೇರಳ ಬ್ಯಾಂಕ್ ಆಡಳಿತ ಮಂಡಳಿಯು ತನ್ನ ಚೂರಲ್ ಮಲಾ ಶಾಖೆಯಲ್ಲಿ ಸಾಲ ಪಡೆದ ಭೂಕುಸಿತದಿಂದ ಸಂತ್ರಸ್ತ ಸಾಲಗಾರರ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದೆ.
ಅಲ್ಲದೇ ಸಾಲ ಪಡೆಯಲು ಒತ್ತೆ ಇಟ್ಟಿರುವ ಮನೆ ಮತ್ತು ಆಸ್ತಿಯನ್ನು ಕಳೆದುಕೊಂಡವರ ಸಂತ್ರಸ್ತರ ಸಾಲವನ್ನು ಮನ್ನಾ ಮಾಡಲು ಮುಂದಾಗಿದೆ ಎಂದು ಬ್ಯಾಂಕ್ ನ ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.
ಜುಲೈ 30 ರಂದು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಈ ಮೂಲಕ ನೆರವಾಗಲು ಕೇರಳ ಬ್ಯಾಂಕ್ ನಿರ್ಧರಿಸಿದೆ. ಕೇರಳ ಬ್ಯಾಂಕ್ ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದೆ.
ಇದಲ್ಲದೆ, ಬ್ಯಾಂಕ್ ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ವೈಯುಕ್ತಿಕವಾಗಿ ಸಿಎಂ ಪರಿಹಾರ ನಿಧಿಗೆ ತಮ್ಮ ಐದು ದಿನಗಳ ವೇತನವನ್ನು ನೀಡಲು ನಿರ್ಧರಿಸಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ.