ಆಫ್ರಿಕಾ ಹಂದಿ ಜ್ವರ ಪ್ರಕರಣ | ಕೇರಳದಲ್ಲಿ 310 ಹಂದಿಗಳ ಹತ್ಯೆ
Update: 2024-07-07 17:28 GMT
ಹೊಸದಿಲ್ಲಿ : ಆಫ್ರಿಕಾ ಹಂದಿ ಜ್ವರದ ಸೋಂಕು ಹರಡಿದ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸುಮಾರು 310 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಸರಕಾರ ರವಿವಾರ ತಿಳಿಸಿದೆ.
ಆಫ್ರಿಕಾ ಹಂದಿ ಜ್ವರ ಮಡಕ್ಕಾತರನ್ ಪಂಚಾಯತ್ ನಲ್ಲಿ ಹರಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪಶು ಸಂಗೋಪನೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ ಎಂದು ಅದು ತಿಳಿಸಿದೆ.
ಆಫ್ರಿಕಾ ಹಂದಿ ಜ್ವರ ಹರಡಿದ ಕೇಂದ್ರದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಹಾಗೂ ವಿಲೇವಾರಿ ಮಾಡಲು ಕ್ಷಿಪ್ರ ನಿರ್ವಹಣಾ ತಂಡವನ್ನು ಜುಲೈ 5ರಂದು ನಿಯೋಜಿಸಲಾಗಿದೆ ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯದ ಹೇಳಿಕೆ ತಿಳಿಸಿದೆ.
ಆಫ್ರಿಕಾ ಹಂದಿ ಜ್ವರ 2020 ಮೇಯಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಂ ಹಾಗೂ ಅರುಣಾಚಲಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಅನಂತರ ಈಗ ಕೇರಳದಲ್ಲಿ ಕಾಣಿಸಿಕೊಂಡಿದೆ.