ಕೇರಳ | ಶಂಕಿತ ಎಂಪಾಕ್ಸ್ ಸೋಂಕು ಪತ್ತೆ

Update: 2024-09-17 15:49 GMT

ಸಾಂದರ್ಭಿಕ ಚಿತ್ರ

ಮಲಪ್ಪುರಂ :ಶಂಕಿತ ಮಂಕಿಪಾಕ್ಸ್ (ಎಂಪಾಕ್ಸ್) ಸೋಂಕಿನ ಪ್ರಕರಣವೊಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಂಗಳವಾರ ವರದಿಯಾಗಿದೆ.

ಇತ್ತೀಚೆಗೆ ವಿದೇಶದಿಂದ ವಾಪಸಾಗಿದ್ದ ವ್ಯಕ್ತಿಯೊಬ್ಬರು, ಎಂಪಾಕ್ಸ್ ರೋಗಲಕ್ಷಣಗಳನ್ನು ಪ್ರದರ್ಶಿಸಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಲ್ಲಿಂದ ಅವರನ್ನು ಮಂಜೇರಿ ಮೆಡಿಕಲ್ ಕಾಲೇಜ್‌ಗೆ ದಾಖಲಿಸಲಾಗಿತ್ತು. ಇದೊಂದು ಮಂಕಿಪಾಕ್ಸ್ ಪ್ರಕರಣವಾಗಿರುವ ಸಾಧ್ಯತೆಯಿದ್ದುದರಿಂದ ರೋಗಿಯ ಮಾದರಿಗಳನ್ನು ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಪಾಕ್ಸ್ ಸೋಂಕಿನ ನೂತನ ಪ್ರಕರಣವೊಂದು ಕಳೆದ ವಾರ ಹೊಸದಿಲ್ಲಿಯಲ್ಲಿ ವರದಿಯಾಗಿತ್ತು. ಹರ್ಯಾಣದ ಹಿಸಾರ್‌ನ 26 ವರ್ಷದ ನಿವಾಸಿಗೆ ಎಂಪಾಕ್ಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಆತನನ್ನು ದಿಲ್ಲಿಯ ಸರಕಾರಿ ಸ್ವಾಮ್ಯದ ಲಾಲಾಲಜಪತ್‌ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News