ಕೇರಳ | ನಿಫಾದಿಂದ ಮೃತಪಟ್ಟ ಬಾಲಕ, ಬಾವಲಿಗಳೇ ತುಂಬಿದ್ದ ಮರದಿಂದ ಹಣ್ಣು ಸೇವಿಸಿದ್ದ!
Update: 2024-07-22 11:42 GMT
ತಿರುವನಂತಪುರಂ: ಕೇರಳದ ಮಲಪ್ಪುರಂನಲ್ಲಿ ಇತ್ತೀಚೆಗೆ ನಿಫಾ ಸೋಂಕಿನಿಂದ ಮೃತಪಟ್ಟ 14 ವರ್ಷದ ಬಾಲಕ ತನ್ನ ಮನೆ ಸಮೀಪದ ಮರದಿಂದ ಪ್ಲಮ್ ಹಣ್ಣನ್ನು ತಿಂದಿದ್ದ ಹಾಗೂ ಈ ಮರ ಇರುವ ಪ್ರದೇಶದಲ್ಲಿ ಝೂನಾಟಿಕ್ ವೈರಸ್ ಹರಡುವ ಬಾವಲಿಗಳು (ಫ್ರೂಟ್ ಬ್ಯಾಟ್) ಸಾಕಷ್ಟು ಇದ್ದವೆಂದು ದೃಢಪಟ್ಟಿದೆ.
ಸ್ಥಳೀಯವಾಗಿ ಈ ಹಣ್ಣನ್ನು ಅಂಬಝಂಗ ಎಂದು ಕರೆಯಲಾಗುತ್ತದೆ. ಆತ ಈ ಹಣ್ಣು ತಿಂದಿರುವುದೇ ಈ ಸೋಂಕಿಗೆ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ.
2001ರಲ್ಲಿ ಕೊಚ್ಚಿಯಲ್ಲಿ ನಿಫಾ ವೈರಸ್‌ನ ಮೊದಲ ಪ್ರಕರಣ ವರದಿಯಾದಾಗ ಸೋಂಕಿತ ವ್ಯಕ್ತಿಯು ಬಾವಲಿ ಕಚ್ಚಿದ ಹಣ್ಣು ಸೇವಿಸಿದ್ದರೆಂದು ತಿಳಿದು ಬಂದಿತ್ತು. 2021ರಲ್ಲಿ ಕೊಝಿಕ್ಕೋಡ್‌ನ ಚತ್ತಮಂಗಲಂ ಎಂಬಲ್ಲಿ ಈ ಸೋಂಕಿನಿಂದ ಬಾಲಕನೊಬ್ಬ ಮೃತಪಟ್ಟಾಗ ಆತ ಆ ಪ್ರಾಂತ್ಯದಲ್ಲಿ ಬೆಳೆದ ರಂಬುಟನ್ ಹಣ್ಣು ಸೇವಿಸಿದ್ದ ಎಂದು ವರದಿಯಾಗಿತ್ತು.