ಕೇರಳ | ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸಿದ್ದ ಮಹಿಳೆ ಮೃತ್ಯು

Update: 2024-05-28 04:58 GMT

ಸಾಂದರ್ಭಿಕ ಚಿತ್ರ PC: PTI

ತ್ರಿಶೂರ್ : ಇಲ್ಲಿನ ಮೂನ್ನುಪೀಡಿಗ ಪ್ರದೇಶದ ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸಿ ಫುಡ್ ಪಾಯಿಸನಿಂಗ್ ಗೆ ಒಳಗಾಗಿ ಅಸ್ವಸ್ಥರಾದವರ ಪೈಕಿ ಮಹಿಳೆಯೋರ್ವರು ಮಂಗಳವಾರ ಮೃತಪಟ್ಟಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೆರಿಂಜಾನಮ್ ನಿವಾಸಿ 50 ವರ್ಷದ ಉಸೈಬಾ ಮೃತಪವಟ್ಟವರು ಎಂದು ತಿಳಿದು ಬಂದಿದೆ. ಪ್ರಸಿದ್ಧ ಖಾದ್ಯ ʼಕುಝಿಮಂದಿʼ ಯೊಂದಿಗೆ ನೀಡಿದ್ದ ಮಯೋನೆಸ್ ಸೇವಿಸಿ ಕನಿಷ್ಠ 70 ಮಂದಿ ಅಸ್ವಸ್ಥರಾಗಿದ್ದ ಘಟನೆ ರವಿವಾರ ವರದಿಯಾಗಿತ್ತು. ಘಟನೆಯ ನಂತರ ಆಹಾರ ಸುರಕ್ಷಾ ಅಧಿಕಾರಿಗಳು ರೆಸ್ಟೋರೆಂಟನ್ನು ಸೀಲ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News