ಹಾವನ್ನು ಕೊಂದ ಗಂಟೆಯ ಬಳಿಕ ಇನ್ನೊಂದು ಹಾವು ಕಡಿತ; ಯುವಕ ಮೃತ್ಯು
ಬರೇಲಿ : ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಯುವಕನೊಬ್ಬ ನಾಗರ ಹಾವನ್ನು ಕೊಂದಿದ್ದು, ಒಂದು ಗಂಟೆಯ ನಂತರ ಇನ್ನೊಂದು ಹಾವು ಕಚ್ಚಿ ಯುವಕ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಈ ಪ್ರಕರಣವು ಕ್ಯಾರ ಗ್ರಾಮದಲ್ಲಿ ಜಿಜ್ಞಾಸೆ ಮತ್ತು ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ, ಸ್ಥಳೀಯರು ಇದನ್ನು ಹಾವಿನ ಸೇಡಿನ ಪ್ರಕರಣ ಎಂದು ನಂಬಿದ್ದಾರೆ.
ಮೃತ ಗೋವಿಂದ್ ಕಶ್ಯಪ್ (32) ಬುಧವಾರ ಕೂಲಿ ಕೆಲಸ ಮಾಡುತ್ತಿದ್ದು, ಸ್ಥಳೀಯ ನಿವಾಸಿ ಅತುಲ್ ಸಿಂಗ್ ಅವರ ಜಮೀನಿನಲ್ಲಿ ಹುಲ್ಲು ಸಂಗ್ರಹಿಸುತ್ತಿದ್ದರು. ಕೆಲಸ ಮಾಡುವಾಗ, ಅವರಿಗೆ ನಾಗರಹಾವು ಎದುರಾಯಿತು. ಯವಕ ಕೋಲಿನಿಂದ ಹೊಡೆದು ಹಾವನ್ನು ಕೊಂದು, ಅದರ ಹೆಡೆಯನ್ನು ಪುಡಿ ಮಾಡಿದ್ದ. ಬಳಿಕ ಊಟಕ್ಕೆ ಮನೆಗೆ ಬಂದಿದ್ದರು ಎನ್ನಲಾಗಿದೆ.
ಸುಮಾರು ಒಂದು ಗಂಟೆಯ ನಂತರ ಗೋವಿಂದ್ ಮತ್ತೆ ಕೆಲಸ ಆರಂಭಿಸಿದಾಗ ಗದ್ದೆಯ ಅದೇ ಸ್ಥಳದಲ್ಲಿ ಮತ್ತೊಂದು ಹಾವು ಕಚ್ಚಿದೆ. ಗೋವಿಂದ್ ತನ್ನ ಮನೆಯ ಕಡೆಗೆ ಓಡಲು ಪ್ರಯತ್ನಿಸುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಆದರೆ ಅವರು ಕೆಲವೇ ಹೆಜ್ಜೆಗಳು ಓಡಿದ ಅವರು ನಂತರ ಕುಸಿದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತೋಟದ ಮಾಲಕ ಅತುಲ್ ಸಿಂಗ್, ಗೋವಿಂದ್ ಅವರಿಗೆ ಹಾವು ಕಚ್ಚಿರುವುದು ಕಂಡು ಕೂಡಲೇ ಅವರ ಕುಟುಂಬಕ್ಕೆ ತಿಳಿಸಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ತೀವ್ರ ವಿಷಪೂರಿತ ಹಾವು ಕಚ್ಚಿದ್ದು, ವಿಷವು ದೇಹಕ್ಕೆ ವೇಗವಾಗಿ ಹರಡಲು ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆ ವೈರಲ್ ಆಗಿದ್ದು ಜನರು ವಿಭಿನ್ನ ವ್ಯಾಖ್ಯಾನಗಳನ್ನು ಹಂಚಿಕೊಳ್ಳುತ್ತಿದ್ದಾರೆ.