ಲಡಾಖ್ | ಸೇನೆಯಿಂದ ಹಿಮಪಾತದ ನಡುವೆ ಸಿಕ್ಕಿಕೊಂಡಿದ್ದ 80 ಜನರ ರಕ್ಷಣೆ
Update: 2024-04-07 15:02 GMT
ಲೇಹ್ : ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಲೇಹ್ ಮತ್ತು ಶ್ಯೋಕ್ ನದಿ ಕಣಿವೆ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್ನಲ್ಲಿ ಹಿಮಪಾತದ ನಡುವೆ ಸಿಕ್ಕಿಹಾಕಿಕೊಂಡಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 80 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆಯು ರವಿವಾರ ತಿಳಿಸಿದೆ.
ತ್ರಿಶೂಲ್ ವಿಭಾಗದ ಯೋಧರು ಈ ಮಧ್ಯರಾತ್ರಿ ಕಾರ‍್ಯಾಚರಣೆಯನ್ನು ನಡೆಸಿದ್ದಾರೆ ಎಂದು ಲೇಹ್ ನಲ್ಲಿಯ ಭಾರತೀಯ ಸೇನೆಯ ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್ ಹೇಳಿದೆ.
ಅದು ರಕ್ಷಣಾ ಕಾರ‍್ಯಾಚರಣೆಯ ಕೆಲವು ಚಿತ್ರಗಳು ಮತ್ತು ವೀಡಿಯೊವನ್ನೂ ಹಂಚಿಕೊಂಡಿದೆ.