ಕಾನೂನಾತ್ಮಕ ಅಧಿಕಾರವಷ್ಟೆ ಸಾಲದು: ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿದ ಮುಖ್ಯ ನ್ಯಾಯಮೂರ್ತಿ ಹೇಳಿಕೆ

Update: 2024-02-28 17:34 GMT

ಡಿ.ವೈ.ಚಂದ್ರಚೂಡ್ | Photo: PTI  

ಹೊಸದಿಲ್ಲಿ: ನ್ಯಾಯಾಧೀಶರ ಮನುಷ್ಯರ ಜೀವನ ಹಾಗೂ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಬಯಕೆಗೆ ಶಕ್ತಿಶಾಲಿ ಸಾಧನವಾಗಿರುವ ಕಾನೂನಾತ್ಮಕ ಅಧಿಕಾರವಷ್ಟೆ ಸಾಲದು ಎಂದು ಬುಧವಾರ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡಿರುವ ನ್ಯಾ. ಸತೀಶ್ ಚಂದ್ರ ಶರ್ಮ, ನ್ಯಾ. ಆಗಸ್ಟಿನ್ ಜಾರ್ಜ್ ಮಾಸಿಹ್, ನ್ಯಾ. ಸಂದೀಪ್ ಮೆಹ್ತಾ ಹಾಗೂ ನ್ಯಾ. ಪ್ರಸನ್ನ ಬಿ.ವರಾಳೆಗೆ ಸ್ವಾಗತ ಕೋರಲಾಯಿತು. ಈ ಎಲ್ಲ ನ್ಯಾಯಾಧೀಶರ ನೇಮಕದಿಂದ ಸುಪ್ರೀಂ ಕೋರ್ಟ್ ಮತ್ತೆ ಕಡ್ಡಾಯ ಸಾಮರ್ಥ್ಯವಾಗಿರುವ 34 ನ್ಯಾಯಾಧೀಶರೊಂದಿಗೆ ಕಾರ್ಯನಿರ್ವಹಿಸತೊಡಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.

ಇದೇ ವೇಳೆ ದಂತಕತೆ ಗಝಲ್ ರಚನೆಕಾರ ಜಗಜಿತ್ ಸಿಂಗ್ ಅವರ ಗಝಲ್ ಒಂದರ ಸಾಲನ್ನೂ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸ್ಮರಿಸಿದರು.

“ನಿರ್ಧಾರ ಕೈಗೊಳ್ಳುವುದೆಂದರೆ, ವಿದ್ವಾಂಸೆ ಕ್ಯಾಥರಿನ್ ವೆಲ್ಸ್ ಅವರ ‘ರೈಡಿಂಗ್ ಎ ಬೈಸಿಕಲ್’ನಿಂದ ಪದಗಳನ್ನು ಕಡ ಪಡೆದಂತೆ ಎಂಬುದು ನನ್ನ ನಂಬಿಕೆಯಾಗಿದೆ. ಒಂದು ವೇಳೆ ನೀವು ನಿಯಂತ್ರಣ ಕಳೆದುಕೊಳ್ಳುತ್ತಿದ್ದರೆ, ಸಮತೋಲನವನ್ನು ಮರುಸ್ಥಾಪಿಸಲು ಸಂಕೀರ್ಣ ಸಿದ್ಧಾಂತವು ನೆರವು ನೀಡುವುದು ಅಸಾಧ್ಯವಾಗಿದೆ. ಅಸಮತೋಲನದ ಕ್ಷಣಗಳಲ್ಲಿ ನಾವು ಕಾನೂನು ಅಥವಾ ನೀತಿಯ ತುಂಬಾ ಸಂಕೀರ್ಣ ಸೈದ್ಧಾಂತಿಕ ಹೇಳಿಕೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಇಂತಹ ಬಿಕ್ಕಟ್ಟಿನ ಕ್ಷಣಗಳಲ್ಲಿ ಸ್ಥಿರೀಕರಿಸುವ ಪ್ರಭಾವು ಪದೇ ಪದೇ ತುಂಬಾ ಸರಳವಾದ ನ್ಯಾಯದ ಉಪಾಯವಾಗಿದೆ. ಈ ಸರಳ ಉಪಾಯವು ನ್ಯಾಯಾಧೀಶರ ಅಪಾರ ಅನುಭವದ ಸಂಗತಿಗಳಾದ ವಕೀಲಿಕೆ, ಕಾನೂನಿನ ವಿದ್ಯಾರ್ಥಿ ಹಾಗೂ ಈ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಸದಸ್ಯನಾಗುವುದರಲ್ಲಿ ಅಡಗಿದೆ. ನ್ಯಾಯಾಧೀಶರೊಬ್ಬರಿಗೆ ಕಾನೂನಾತ್ಮಕ ಅಧಿಕಾರವಷ್ಟೆ ಸಾಲದು. ಬದಲಿಗೆ ಮನುಷ್ಯನ ಜೀವನವನ್ನು ಅರ್ಥ ಮಾಡಿಕೊಳ್ಳುವ ಬಯಕೆಯು ಅಂತಹ ಶಕ್ತಿಶಾಲಿ ಸಾಧನವಾಗಿದೆ” ಎಂದು ಅವರು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News