ಮೂಲಭೂತ ಆರ್ಥಿಕ ಸಮಸ್ಯೆಗಳ ಬಗ್ಗೆ ಮೋದಿ ಗಮನಹರಿಸಲಿ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ : ಮೂಲಭೂತ ಸಮಸ್ಯೆಗಳಿಂದ ಜನ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅವರು ‘ಸಾರ್ವಜನಿಕ ಸಂಪರ್ಕ ಸಂಸ್ಥೆ’ಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಜೂನ್ ತಿಂಗಳ ಲೋಕಸಭಾ ಚುನಾವಣಾ ಫಲಿತಾಂಶಗಳ ಬಳಿಕ ದೇಶದ ಜನತೆ ಪ್ರಚಲಿತ ಸಮಸ್ಯೆಗಳಿಗೆ ಉತ್ತರದಾಯಿತ್ವವನ್ನು ಆಗ್ರಹಿಸುತ್ತಿದ್ದಾರೆಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ದೇಶವನ್ನು ಕಾಡುತ್ತಿರುವ ಮೂಲಭೂತ ಆರ್ಥಿಕ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ‘‘ನರೇಂದ್ರ ಮೋದಿಜೀ ನಿಮ್ಮ ಸರಕಾರವು ಕೋಟ್ಯಂತರ ಜನರನ್ನು ನಿರುದ್ಯೋಗ, ಹಣದುಬ್ಬರ ಹಾಗೂ ಅಸಮಾನತೆಯ ಕೂಪಕ್ಕೆ ತಳ್ಳುವ ಮೂಲಕ ಅವರ ಬದುಕನ್ನು ಹಾಳು ಮಾಡಿದ್ದೀರಿ ಎಂದು ಹೇಳಿದ್ದಾರೆ ಕೇಂದ್ರ ಸರಕಾರದ ‘ವೈಫಲ್ಯ’ಗಳನ್ನು ಪಟ್ಟಿ ಮಾಡಿರುವ ಖರ್ಗೆ, ದೇಶದಲ್ಲಿ ನಿರುದ್ಯೋಗ ದರವು ಶೇ.92 ಆಗಿದ್ದು, ಯುವಜನತೆಯ ಭವಿಷ್ಯವು ಶೂನ್ಯದೆಡೆಗೆ ದಿಟ್ಟಿಸುತ್ತಿದೆ ಎಂದು ಹೇಳಿದ್ದಾರೆ.
20-24 ವರ್ಷಗಳ ವಯೋಮಾನದವರ ನಿರುದ್ಯೋಗ ಪ್ರಮಾಣದಲ್ಲಿ ಶೇ.40ರಷ್ಟು ಏರಿಕೆಯಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ, ಬೆಳೆಗಳಗೆ ಕನಿಷ್ಠ ಬೆಂಬಲ ದರವನ್ನು ವೆಚ್ಚದ ಶೇ.50ರಷ್ಟಕ್ಕೆ ನಿಗದಿಪಡಿಸುವುದಾಗಿ ಕೇಂದರ ಸರಕಾರ ನೀಡಿದ್ದ ಭರವಸೆ ಹುಸಿಯಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿ ಸರಕಾರದ ವಿರುದ್ಧ ಖರ್ಗೆ ಕಿಡಿನುಡಿಗಳು
1. ಬಹುತೇಕ ಸರಕಾರದ ಪಾಲಿನ ಶೇರುಗಳು ಮಾರಾಟಾದ 7 ಸಾರ್ವಜನಿಕರಂಗದ ಉದ್ಯಮಗಳಲ್ಲಿ 3.84 ಲಕ್ಷ ಸರಕಾರಿ ಉದ್ಯೋಗಗಳು ನಷ್ಟವಾಗಿವೆ. 1.25 ಲಕ್ಷ ಜನರು 20 ಅತ್ಯುನ್ನತ ಸಾರ್ವಜನಿಕ ರಂಗದ ಉದ್ಯಮಗಳಲ್ಲಿ ಸರಕಾರಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.
2.ಯುಪಿಎ ಆಡಳಿತದಲ್ಲಿ ಒಟ್ಟು ಆಂತರಿಕ ಉತ್ಪನ್ನದ ಶೇಕಡವಾರು ಪ್ರಮಾಣವು ಶೇ.16.5ರಿಂದ ಶೇ.14.5ಕ್ಕೆ ಕುಸಿದಿದೆ. ಕಳೆದ ಹತ್ತು ವರ್ಷಗಳಲ್ಲಿ ಖಾಸಗಿ ಹೂಡಿಕೆ ಕೂಡಾ ಗಣನೀಯವಾಗಿ ಕುಸಿದಿದೆ.
3. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕಳೆದ 20 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ತುಲುಪಿದ್ದು, ಎಪ್ರಿಲ್-ಜೂನ್ ಅವಧಿಯಲ್ಲಿಕೇವಲ 44,300 ಕೋಟಿ ಆಗಿದೆ.
4. ಹಿಟ್ಟು, ದ್ವಿದಳ ಧಾನ್ಯಗಳು, ಅಕ್ಕಿ,ಹಾಲು, ಸಕ್ಕರೆ, ಬಟಾಟೆ, ಟೊಮ್ಯಾಚೊಗಳು, ನೀರುಳ್ಳಿಹಾಗೂಎಲ್ಲಾ ಅತ್ಯಗತ್ಯ ಆಹಾರ ವಸ್ತುಗಳ ದರ ಗಗನಕ್ಕೇರಿವೆ.
5. ಕುಟುಂಬಗಳ ಉಳಿತಾಯವು ಕಳೆದ 50 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
6.ಆರ್ಥಿಕ ಅಸಮಾನತೆಯು 100 ವರ್ಷಗಳಲ್ಲೇ ಅತ್ಯಧಿಕವಾಗಿದೆ.