ಅಯೋಧ್ಯೆಯಲ್ಲಿ ಬಿಜೆಪಿಗೆ ಮುಳುವಾದ ಎಸ್ಪಿಯ 'ದಲಿತ ಮಂತ್ರ'

Update: 2024-06-06 05:50 GMT

ಅಯೋಧ್ಯೆ: "ನ ಮಥುರಾ, ನ ಕಾಶಿ, ಅಬ್ಕಿ ಬಾರ್ ಅವಧೇಶ್ ಪಾಸಿ" (ಮಥುರವೂ ಅಲ್ಲ; ಕಾಶಿಯೂ ಅಲ್ಲ ಈ ಬಾರಿ ಅವಧೇಶ್ ಪಾಸಿ) ಎಂಬ ಸಮಾಜವಾದಿ ಪಕ್ಷದ ಚುನಾವಣಾ ಘೋಷಣೆ, ಈ ಬಾರಿ ರಾಮಮಂದಿರದ ಅಲೆಯಲ್ಲಿ ತೇಲುತ್ತಿದ್ದ ಕೇಸರಿ ಪಕ್ಷ ಮುಖಭಂಗ ಅನುಭವಿಸಲು ಕಾರಣವಾಗಿದೆ.

ದೇಶಾದ್ಯಂತ ಅಯೋಧ್ಯೆ ರಾಮಮಂದಿರ ನಿರ್ಮಾಣವನ್ನು ಪ್ರಮುಖ ಚುನಾವಣಾ ವಿಷಯವಾಗಿ ಬಿಜೆಪಿ ಬಿಂಬಿಸಿದ್ದರೂ, ರಾಮ ಜನ್ಮಭೂಮಿ ಮಾತ್ರ ಈ ಪಕ್ಷವನ್ನು ತಿರಸ್ಕರಿಸಿದೆ. ಅಯೋಧ್ಯೆ ಪ್ರದೇಶ ಒಳಗೊಂಡಿರುವ ಫೈಝಾಬಾದ್ ಲೋಕಸಭಾ ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ.

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಪಾಸಿ ಸಮುದಾಯದ ಅವಧೇಶ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸುವ ಮೂಲಕ ಸಮಾಜವಾದಿ ಪಕ್ಷ ಹೊಸ ಪ್ರಯೋಗ ನಡೆಸಿತ್ತು. 9 ಬಾರಿಯ ಶಾಸಕ ಹಾಗೂ ಮಾಜಿ ಸಚಿವ ಅವಧೇಶ್ ಈ ಬಾರಿ ಬಿಜೆಪಿಯ ಲಲ್ಲು ಸಿಂಗ್ ವಿರುದ್ಧ 55 ಸಾವಿರ ಮತಗಳ ಅಂತರದ ಗೆಲುವು ಸಾಧಿಸಿದರು. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬಂದ ಆಡಳಿತ ವಿರೋಧಿ ಅಲೆ ಎರಡು ಬಾರಿಯ ಸಂಸದ ಲಲ್ಲು ಅವರಿಗೆ ಮುಳುವಾಯಿತು.

1957ರ ಬಳಿಕ ಇದೇ ಮೊದಲ ಬಾರಿಗೆ ಫೈಝಾಬಾದ್ ಕ್ಷೇತ್ರ ಪರಿಶಿಷ್ಟ ವರ್ಗದ ಪ್ರತಿನಿಧಿಯೊಬ್ಬರನ್ನು ಸಂಸತ್ತಿಗೆ ಕಳುಹಿಸಿದೆ. ರಾಮಮಂದಿರದ ಹೆಸರಿನಲ್ಲಿ ಮತ ಸೆಳೆಯುವ ಸಣ್ಣ ಪ್ರಯತ್ನವನ್ನೂ ಬಿಜೆಪಿ ತಪ್ಪಿಸಿಕೊಂಡಿಲ್ಲ. ಚುನಾವಣೆಯ ಅವಧಿಯಲ್ಲಿ ಸಾಕಷ್ಟು ತಂತ್ರಗಾರಿಕೆ ನಡೆಸಿದ ಬಿಜೆಪಿ, ಎಲ್ಲ ಸಮುದಾಯಗಳ ಬಿಜೆಪಿ ಮುಖಂಡರು ಅಯೋಧ್ಯೆಗೆ ಭೇಟಿ ನೀಡುವಂತೆ ತಂತ್ರ ಹೂಡಿತ್ತು. ಬಿಜೆಪಿ ಆಡಳಿತ ರಾಜ್ಯಗಳ ರಾಜ್ಯಪಾಲರು, ಇತರ ಗಣ್ಯರು ರಾಮಮಂದಿರಕ್ಕೆ ಭೇಟಿ ನೀಡುವ ಮೂಲಕ ರಾಜಕೀಯ ಲಾಭ ಪಡೆಯುವ ಎಲ್ಲ ಪ್ರಯತ್ನ ನಡೆಸಿತ್ತು. ಆದರೆ ಜನರಿಗೆ ತಮ್ಮನ್ನು ತಪ್ಪುದಾರಿಗೆ ಎಳೆಯಲಾಗಿದೆ ಎನ್ನುವುದು ಮನವರಿಕೆಯಾಯಿತು" ಎಂದು ಅವಧೇಶ್ ಹೇಳಿದ್ದಾರೆ.

ಅಯೋಧ್ಯೆ ಮಂದಿರದ ಸುತ್ತಮುತ್ತ ನಡೆಯುವ ಅಭಿವೃದ್ಧಿ ಕಾರ್ಯಗಳನ್ನು ಕೂಡಾ ಕೇಸರಿ ಪಕ್ಷ ಬಿಂಬಿಸುತ್ತ ಬಂದಿತ್ತು. ಆದರೆ ಈ ರೂಪಾಂತರ ಕೂಡಾ ಬಿಜೆಪಿಯ ಕೈ ಹಿಡಿಯಲಿಲ್ಲ. ಅಖಿಲೇಶ್ ಅವರ ಪಿಡಿಎ ಮಂತ್ರ, ಈ ಮೂರು ವರ್ಗಗಳ ಮತಗಳ ಕ್ರೋಢೀಕರಣಕ್ಕೆ ನೆರವಾಯಿತು. ಬಿಜೆಪಿಯ ಈ ಪರಿವರ್ತನೆ ಮತ್ತು ಅಭಿವೃದ್ಧಿ ಯೋಜನೆಗಳು ಸ್ಥಳೀಯರಿಗೆ ಸಮಸ್ಯೆಗಳ ಸರಮಾಲೆಯನ್ನು ತಂದೊಡ್ಡಿದ್ದು, ಇದು ಪಕ್ಷದ ಪಾಲಿಗೆ ಮುಳುವಾಯಿತು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News