ಜೂ.26ರಂದು ಲೋಕಸಭಾ ಸ್ಪೀಕರ್ ಚುನಾವಣೆ

Update: 2024-06-13 16:44 GMT

PC : PTI 

ಹೊಸದಿಲ್ಲಿ : 18ನೇ ಲೋಕಸಭೆಯು ಜೂ.24ರಿಂದ ಆರಂಭಗೊಳ್ಳಲಿದ್ದು, ಜೂ.26ರಂದು ಸ್ಪೀಕರ್ ಚುನಾವಣೆ ನಡೆಯಲಿದೆ.

ಸರಕಾರಿ ಕಲಾಪಗಳ ಅಗತ್ಯವನ್ನು ಅವಲಂಬಿಸಿ ಅಧಿವೇಶವು ಜು.3ರಂದು ಅಂತ್ಯಗೊಳ್ಳುವ ನಿರೀಕ್ಷೆಯಿದೆ ಎಂದು ಸರಕಾರವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂ.27ರಂದು ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಮುಂದಿನ ಐದು ವರ್ಷಗಳಿಗೆ ಸರಕಾರದ ಮಾರ್ಗಸೂಚಿಯನ್ನು ಮಂಡಿಸುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಲೋಕಸಭಾ ಸದಸ್ಯರ ಮೊದಲ ಸಭೆಯಲ್ಲಿ ಸ್ಪೀಕರ್ ಆಯ್ಕೆ ನಡೆಯುತ್ತದೆ. ಅದಕ್ಕೂ ಮುನ್ನ ಸಾಮಾನ್ಯವಾಗಿ ದೀರ್ಘಕಾಲೀನ ಸಂಸದರೋರ್ವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗುತ್ತದೆ. ನೂತನ ಸದನದ ಮೊದಲ ಕೆಲವು ಬೈಠಕ್‌ಗಳ ಅಧ್ಯಕ್ಷತೆಯನ್ನು ವಹಿಸುವ ಅವರು ನೂತನ ಸಂಸದರಿಗೆ ಪ್ರಮಾಣ ವಚನಗಳನ್ನು ಬೋಧಿಸುತ್ತಾರೆ ಮತ್ತು ಸ್ಪೀಕರ್ ಹಾಗೂ ಉಪಸ್ಪೀಕರ್ ಚುನಾವಣೆಗಳನ್ನು ನಡೆಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News