ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಕಾಂಗ್ರೆಸ್, ಎನ್ಸಿಪಿ ಘೋಷಿಸುವ ಯಾವುದೇ ಸಿಎಂ ಅಭ್ಯರ್ಥಿಗೆ ಬೆಂಬಲ: ಉದ್ಧವ್ ಠಾಕ್ರೆ

Update: 2024-10-08 14:55 GMT

ಉದ್ಧವ್ ಠಾಕ್ರೆ | PTI

ಮುಂಬೈ: ಮಹಾರಾಷ್ಟ್ರವನ್ನುಳಿಸಲು ಕಾಂಗ್ರೆಸ್, ಎನ್ಸಿಪಿ ಘೋಷಿಸುವ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಗೆ ಬೆಂಬಲ ನೀಡಲಾಗುವುದು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಕಟಿಸಿದ್ದಾರೆ.

ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಮುಂದಿನ ತಿಂಗಳ ನಡೆಯುವ ಸಾಧ್ಯತೆ ಇರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಸುಳ್ಳು ನಿರೂಪಣೆಗಳನ್ನು ಮಹಾರಾಷ್ಟ್ರ ಸರಕಾರ ಹರಡುತ್ತಿದೆ ಎಂದು ಆರೋಪಿಸಿದ್ದಾರೆ.

ಮಹಾಯುತಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಲಡ್ಕಿ ಬಹಿನ್ ಯೋಜನೆಯ ಮೂಲಕ ರಾಜ್ಯದ ಅರ್ಹ ಮಹಿಳೆಯರಿಗೆ ಮಾಸಿಕ ರೂ. 1,500 ನೀಡುವ ಸರಕಾರದ ಉಪಕ್ರಮದ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, ಜನರಿಗೆ ಅವರದೇ ದುಡ್ಡನ್ನು ಹಿಂದಕ್ಕೆ ನೀಡುವ ಮೂಲಕ ಜನರು ‘ಮಹಾರಾಷ್ಟ್ರ ಧರ್ಮ’ಕ್ಕೆ ದ್ರೋಹ ಬಗೆಯುವಂತೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News