ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬ: ಮಹಾರಾಷ್ಟ್ರ ಸರ್ಕಾರಕ್ಕೆ ಮಹುವಾ ಮೊಯಿತ್ರಾ ತರಾಟೆ

Update: 2024-08-21 05:48 GMT

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (PTI)

ಹೊಸದಿಲ್ಲಿ: ನಾಲ್ಕು ವರ್ಷದ ಬಾಲಕಿಯರ ಮೇಲೆ ಶಾಲೆಯಲ್ಲಿ ಕಸಗುಡಿಸುವಾತನು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರ ತಡವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತೀವ್ರವಾಗಿ ಟೀಕಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಮೊಯಿತ್ರಾ ಅವರು, ರಾಜ್ಯಪಾಲರು ಏಕೆ ತಕ್ಷಣ ಕ್ರಮ ಕೈಗೊಂಡಿಲ್ಲ. ಕೋಲ್ಕತ್ತಾ ಪ್ರಕರಣದಲ್ಲಿ ಮಾಡಿದಂತೆ ಪ್ರಕರಣವನ್ನು ಸಿಬಿಐಗೆ ಏಕೆ ಹಸ್ತಾಂತರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಕರಣವನ್ನು ಪಶ್ಚಿಮ ಬಂಗಾಳದ ವೈದ್ಯೆಯ ಕೊಲೆ ಪ್ರಕರಣದ ತನಿಖೆಯೊಂದಿಗೆ ಹೋಲಿಸಿದ ಅವರು ಕೋಲ್ಕತ್ತಾ ಪೊಲೀಸರು ಆರೋಪಿಯನ್ನು ಗಂಟೆಗಳೊಳಗೆ ಬಂಧಿಸಿದ್ದರು ಮತ್ತು ಶವಪರೀಕ್ಷೆಯನ್ನು ವೀಡಿಯೊಗ್ರಾಫ್ ಮಾಡಲಾಯಿತು. ಆದರೆ ಮಹಾರಾಷ್ಟ್ರ ಪೊಲೀಸರು ದಿನಗಟ್ಟಲೆ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರು ಎಂದು ಮೊಯಿತ್ರಾ ಆರೋಪಿಸಿದ್ದಾರೆ. ಇದು "ನಿಜವಾದ ಪ್ರಜಾಪ್ರಭುತ್ವವಲ್ಲದ ಮೈತ್ರಿ" ಯ ಎಂದು ಅವರು ಹೇಳಿದ್ದಾರೆ.

ಥಾಣೆ ಜಿಲ್ಲೆಯ ಬದ್ಲಾಪುರ್ ರೈಲು ನಿಲ್ದಾಣವು ಮಂಗಳವಾರ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಸಂತ್ರಸ್ತರಿಗೆ ನ್ಯಾಯಕ್ಕಾಗಿ ಸಾವಿರಾರು ಜನರು ರೈಲು ಹಳಿಗಳನ್ನು ತಡೆದಿರುವ ಘಟನೆಗಳು ವರದಿಯಾಗುತ್ತಿದ್ದಂತೆ ಅವರ ಹೇಳಿಕೆಗಳು ಬಂದಿವೆ. ಪ್ರತಿಭಟನೆಯಿಂದಾಗಿ ಸ್ಥಳೀಯ ರೈಲು ಸೇವೆಗಳಲ್ಲಿ ಅಡಚಣೆಯುಂಟಾಯಿತು. ಹಲವಾರು ದೂರದ ರೈಲುಗಳನ್ನು ಮಾರ್ಗ ಬದಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News