ಸರ್ಕಾರಿ ಬಂಗಲೆ ತೆರವುಗೊಳಿಸದಿದ್ದರೆ ಬಲ ಪ್ರಯೋಗ; ಮಹುವಾ ಮೊಯಿತ್ರಾಗೆ ನೋಟಿಸ್‌ ಜಾರಿ

Update: 2024-01-17 06:55 GMT

ಮಹುವಾ ಮೊಯಿತ್ರಾ (PTI)

ಹೊಸದಿಲ್ಲಿ: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಸಂಸತ್ತಿನಿಂದ ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್‌ ಪಕ್ಷದ ಮಹುವಾ ಮೊಯಿತ್ರಾ ತಮ್ಮ ಅಧಿಕೃತ ಸರ್ಕಾರಿ ಬಂಗಲೆ ತೆರವುಗೊಳಿಸಲು ಸೂಚಿಸಿ ನೀಡಲಾದ ನೋಟಿಸ್‌ ಹಾಗೂ ಅಗತ್ಯವಿದ್ದರೆ “ಬಲ ಪ್ರಯೋಗದ” ಎಚ್ಚರಿಕೆ ನೀಡಿರುವುದನ್ನು ಪ್ರಶ್ನಿಸಿ ಇಂದು ದಿಲ್ಲಿ ಹೈಕೋರ್ಟ್‌ ಕದ ತಟ್ಟಲಿದ್ದಾರೆಂದು ತಿಳಿದು ಬಂದಿದ್ದಾರೆ.

ಮಹುವಾ ಅವರು ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಹೆಸರಿಸಲ್ಪಟ್ಟಿರುವುದರಿಂದ ಅವರಿಗೆ ಅವರ ಸರ್ಕಾರಿ ನಿವಾಸದಲ್ಲಿ ಇರಲು ಅನುಮತಿಸಬೇಕೆಂದು ಅವರ ವಕೀಲರು ವಾದಿಸುವ ಸಾಧ್ಯತೆಯಿದೆ.

ಸಂಸದರಿಗೆ ಸಾಮಾನ್ಯವಾಗಿ ಸಂಸತ್‌ ಅಧಿವೇಶನದ ಜೊನೆಯ ದಿನದಿಂದ ಚುನಾವಣಾ ಫಲಿತಾಂಶದ ದಿನದ ತನಕ ತಮ್ಮ ನಿವಾಸಗಳಲ್ಲಿರಲು ಅನುವತಿ ಇರುವುದರಿಂದ ಈ ನಿಯಮವು ಮಹುವಾ ಅವರಿಗೂ ಅನ್ವಯವಾಗುತ್ತದೆ ಎಂಬುದು ಅವರ ವಾದವಾಗಿದೆ.

ಸರ್ಕಾರಿ ಆಸ್ತಿಗಳನ್ನು ನಿರ್ವಹಿಸುವ ಡೈರೆಕ್ಟರೇಟ್‌ ಆಫ್‌ ಎಸ್ಟೇಟ್ಸ್‌ ನೀಡಿರುವ ನೋಟಿಸಿನಲ್ಲಿ ಮಹುವಾ ಮತ್ತು ಅವರ ಮನೆಯಲ್ಲಿ ಯಾರಾದರೂ ಇದ್ದರೆ ಅವರು ತಾವಾಗಿಯೇ ನಿವಾಸ ತೊರೆಯದೇ ಇದ್ದರೆ ಅಗತ್ಯ ಬಿದ್ದರೆ ಬಲ ಪ್ರಯೋಗದ ಮೂಲಕ ತೆರವುಗೊಳಿಸಲಾಗುವುದು ಎಂದು ಹೇಳಲಾಗಿದೆ.

ಈ ಹಿಂದೆಯೂ ಮಹುವಾ ಈ ವಿಚಾರದಲ್ಲಿ ಕೋರ್ಟ್‌ ಮೆಟ್ಟಿಲು ಹತ್ತಿದ್ದಾಗ, ಹೈಕೋರ್ಟ್‌ ಅವರಿಗೆ ಸದ್ಯಕ್ಕೆ ನಿವಾಸದಲ್ಲಿರಲು ಅನುಮತಿಸಿತ್ತಲ್ಲದೆ ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಒಂದು ನಿರ್ದಿಷ್ಟ ಶುಲ್ಕ ಪಾವತಿಸಿದಲ್ಲಿ ಆರು ತಿಂಗಳುಗಳ ಕಾಲ ಸರ್ಕಾರಿ ಬಂಗಲೆಗಳಲ್ಲಿ ವಾಸಿಸಬಹುದಾದ ನಿಯಮಗಳನ್ನು ಆಗ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News