ಚೆನ್ನೈ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನದ ಚಕ್ರ ಸ್ಫೋಟ: ಪ್ರಯಾಣಿಕರು ಸುರಕ್ಷಿತ
Update: 2024-01-18 09:01 GMT
ಚೆನ್ನೈ: ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಿಂದ ಮಲೇಶಿಯಾದ ಕೌಲಲಂಪುರಕ್ಕೆ ಹೊರಟಿದ್ದ ಅಂತರಾಷ್ಟ್ರೀಯ ವಿಮಾನವೊಂದರ ಚಕ್ರ ಸ್ಪೋಟಗೊಂಡಿದೆ. ಅವಗಢದ ವೇಳೆ 130 ಪ್ರಯಾಣಿಕರು ವಿಮಾನದಲ್ಲಿದ್ದರಾದರೂ, ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ.
ಕೌಲಾಲಂಪುರದ ಕಡೆಗೆ ಹಾರಲು ಅಣಿಯಾಗಿದ್ದ ವಿಮಾನದ ಹಿಂಬದಿಯ ಚಕ್ರ ಕಡೆ ಕ್ಷಣದಲ್ಲಿ ಸ್ಪೋಟಗೊಂಡಿದ್ದು, ತಕ್ಷಣವೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.