ವ್ಯಕ್ತಿಗೆ ಥಳಿಸಿ ಬಾಯಿಯಿಂದ ಶೂ ಮೇಲೆತ್ತುವಂತೆ ಮಾಡಿದ ದುಷ್ಕರ್ಮಿಗಳು

Update: 2023-07-24 12:38 GMT

ಸಾಂದರ್ಭಿಕ ಚಿತ್ರ

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಎರಡು ವರ್ಷದ ಹಿಂದೆ ನಡೆದಿತ್ತೆನ್ನಲಾಧ ಅಮಾನವೀಯ ಘಟನೆಯೊಂದರ ವೀಡಿಯೋ ವೈರಲ್‌ ಆಗಿದ್ದು ಅದರಲ್ಲಿ ಕೆಲ ದುಷ್ಕರ್ಮಿಗಳು 34 ವರ್ಷದ ವ್ಯಕ್ತಿಯನ್ನು ಭಾಗಶಃ ವಿವಸ್ತ್ರಗೊಳಿಸಿದ್ದೇ ಅಲ್ಲದೆ ಆತನಿಗೆ ಥಳಿಸಿ, ಬಾಯಿಯಿಂದ ಶೂ ಎತ್ತಿಕೊಳ್ಳುವಂತೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ವೈರಲ್‌ ಆದ ಬೆನ್ನಿಗೇ ಪ್ರಮುಖ ಆರೋಪಿ ಮತ್ತಾತನ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೀಡಿಯೋದಲ್ಲಿ ಸಂತ್ರಸ್ತನ ಕೈ ಬೆನ್ನ ಹಿಂದೆ ಕಟ್ಟಿರುವುದು ಹಾಗೂ ಆತ ತನ್ನ ಮೇಲೆ ದಯೆ ತೋರಿ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ರೇವಾ ಜಿಲ್ಲೆಯ ಹನುಮ್ನ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರಾಹಿ ಎಂಬ ಗ್ರಾಮದಲ್ಲಿ ಮೇ 2021 ರಲ್ಲಿ ಈ ಘಟನೆ ನಡೆದಿತ್ತು ಎಂದು ಹೇಳಲಾಗಿದೆ.

ಪ್ರಮುಖ ಆರೋಪಿ ಆದಿವಾಸಿ ಸಮುದಾಯದವನಾಗಿದ್ದರೆ ಸಂತ್ರಸ್ತ ಮೇಲ್ಜಾತಿಗೆ ಸೇರಿದವನು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಗ್ರಾಮದ ಸರ್ಕಾರಿ ಶಾಲೆಯೊಂದರ ಕ್ಲರ್ಕ್‌ ಆಗಿದ್ದಾನಲ್ಲದೆ ಗ್ರಾಮ ಸರಪಂಚೆಯ ಗಂಡನಾಗಿದ್ದಾನೆ.

ಆತ ಸಂತ್ರಸ್ತನನ್ನು ಅಪಹರಿಸಿ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News