ತಮಿಳುನಾಡಿನಲ್ಲಿ ತರಬೇತಿ ನಡೆಸಲು ಮಣಿಪುರ ಕ್ರೀಡಾಪಟುಗಳನ್ನು ಆಹ್ವಾನಿಸಿದ ಎಂ.ಕೆ. ಸ್ಟಾಲಿನ್

Update: 2023-07-23 06:54 GMT

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರವಿವಾರ ಹಿಂಸಾಚಾರ ಪೀಡಿತ ಮಣಿಪುರದ ಕ್ರೀಡಾಪಟುಗಳನ್ನು ತಮ್ಮ ರಾಜ್ಯದಲ್ಲಿ ತರಬೇತಿ ಪಡೆಯಲು ಆಹ್ವಾನಿಸಿದ್ದಾರೆ, ಸ್ಟಾಲಿನ್ ಅವರ ಮಗ ಹಾಗೂ ಕ್ರೀಡಾ ಸಚಿವ ಉದಯಾನಿಧಿ ಈ ವಿಚಾರಕ್ಕೆ ಸಂಬಂಧಿಸಿ ಕ್ರೀಡಾಪಟುಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದರು.

ಖೇಲೊ ಇಂಡಿಯಾ ಮತ್ತು ಏಷ್ಯನ್ ಕ್ರೀಡಾಕೂಟಗಳಂತಹ ಕಾರ್ಯಕ್ರಮಗಳಿಗೆ ತರಬೇತಿ ಪಡೆಯಲು ಅಲ್ಲಿನ ಕ್ರೀಡಾಪಟುಗಳಿಗೆ ಮಣಿಪುರದ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ತಮಿಳುನಾಡಿನಲ್ಲಿ ಮಣಿಪುರ ಕ್ರೀಡಾಪಟುಗಳಿಗೆ ವ್ಯವಸ್ಥೆ ಮಾಡಲು ನಾನು ಯುವ ಕಲ್ಯಾಣ ಹಾಗೂ ಕ್ರೀಡಾ ಅಭಿವೃದ್ಧಿ ಸಚಿವ ಉದಯಾನಿಧಿ ಸ್ಟಾಲಿನ್ ಅವರಿಗೆ ನಿರ್ದೇಶಿಸಿದ್ದೇನೆ" ಎಂದು ಸ್ಟಾಲಿನ್ ಹೇಳಿದರು.

ಕ್ರೀಡಾ ಇಲಾಖೆಯ ಪರವಾಗಿ "ಉತ್ತಮ-ಗುಣಮಟ್ಟದ" ಸೌಲಭ್ಯಗಳನ್ನು ಒದಗಿಸುವುದಾಗಿ ಉದಯಾನಿಧಿ ಭರವಸೆ ನೀಡಿದ್ದಾರೆ.

ತಮಿಳುನಾಡು ಖೇಲೊ ಇಂಡಿಯಾ ಕ್ರೀಡಾಕೂಟದ 2024 ಆವೃತ್ತಿಯನ್ನು ಆಯೋಜಿಸಲಿದೆ.

ಮಣಿಪುರವು "ಚಾಂಪಿಯನ್ಸ್, ವಿಶೇಷವಾಗಿ ಮಹಿಳಾ ಚಾಂಪಿಯನ್ಗಳನ್ನು" ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿದೆ ಹಾಗೂ ತಮಿಳುನಾಡು ಅಲ್ಲಿನ ಸ್ಥಿತಿಗತಿಯನ್ನು "ತೀವ್ರ ಕಾಳಜಿ ಹಾಗೂ ದುಃಖದಿಂದ" ವೀಕ್ಷಿಸುತ್ತಿದೆ'' ಎಂದು ಸ್ಟಾಲಿನ್ ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News