ಸಲಿಂಗ ವಿವಾಹಕ್ಕೆ ಮೇಘಾಲಯ ಕ್ಯಾಥೋಲಿಕ್ ಧರ್ಮ ಗುರುಗಳ 'ಆಶೀರ್ವಾದ'

Update: 2023-12-24 03:17 GMT

Photo: PTI

ಗುವಾಹತಿ: ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನೀತಿಗೆ ಐತಿಹಾಸಿಕ ಬದಲಾವಣೆ ತಂದ ಬೆನ್ನಲ್ಲೇ, ಮೇಘಾಲಯದ ಧರ್ಮಗುರುಗಳು ಸಲಿಂಗ ವಿವಾಹವಾದವರನ್ನು ಆಶೀರ್ವದಿಸಬಹುದು ಎಂದು ಶಿಲ್ಲಾಂಗ್ ಧರ್ಮಪ್ರಾಂತ್ಯ ಶುಕ್ರವಾರ ಅನುಮತಿ ನೀಡಿದೆ. ಆದರೆ ಅನೌಪಚಾರಿಕ ಶಬ್ದಗಳಲ್ಲಿ ಆಶೀರ್ವದಿಸಬಹುದೇ ವಿನಃ ಇದು ಈ ಸಂಯೋಗಕ್ಕೆ ಮಾನ್ಯತೆ ನೀಡುವ ಕ್ರಮವಲ್ಲ ಎಂದು ಸ್ಪಷ್ಟಪಡಿಸಿದೆ.

ಶಿಲ್ಲಾಂಗ್ ಧರ್ಮಪ್ರಾಂತ್ಯ ಈಶಾನ್ಯ ಭಾರತದ ಪ್ರಥಮ ಧರ್ಮಪ್ರಾಂತ್ಯವಾಗಿದೆ. ಎಲ್ಲ ಧರ್ಮಗುರುಗಳಿಗೆ ಪತ್ರ ಬರೆದಿರುವ ಆರ್ಚ್ ಬಿಷಪ್ ವಿಕ್ಟರ್ ಲಿಂಗ್ಡೊ, ಸಲಿಂಗ ವಿವಾಹಕ್ಕೆ ಧರ್ಮಗುರುಗಳು ನೀಡುವ ಆಶೀರ್ವಾದವು ವಿವಾಹ ವಿಧಿವಿಧಾನಕ್ಕೆ ಚರ್ಚ್ ನೀಡುವ ವಿಧಿವಿಧಾನದ ರೂಪದ್ದಾಗಿರುವುದಿಲ್ಲ. ಇದು ಅನೌಪಚಾರಿಕ ಮಾತುಗಳ ಜತೆಗೆ ಧರ್ಮಗುರುಗಳ ಸ್ವಯಂ ಪ್ರಾರ್ಥನೆಯಾಗಿರುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಈ ಆಶೀರ್ವಾದವನ್ನು ಅಧಿಕೃತ ಮುದ್ರೆ ಎಂದು ಪರಿಗಣಿಸಬಾರದು ಮತ್ತು ಚರ್ಚ್ ನಲ್ಲಿ ವಿವಾಹದ ವೇಳೆ ನಡೆಯುವ ಸಾಂಪ್ರದಾಯಿಕ ಆಶೀರ್ವಾದ ಎಂದು ಪರಿಗಣಿಸುವಂತಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಡಿಸೆಂಬರ್ 18ರಂದು ಬಿಡುಗಡೆ ಮಾಡಲಾದ ಪೋಪ್ ಫ್ರಾನ್ಸಿಸ್ ಅವರ "ಫಿಡುಸಿಯಾ ಸಪ್ಲಿಕಾನ್ಸ್' ಘೋಷಣೆಯನ್ನು ಆರ್ಚ್ ಬಿಷಪ್ ಉಲ್ಲೇಖಿಸಿದ್ದಾರೆ. ಇದರಲ್ಲಿ ಆಶೀರ್ವಾದದ ಅರ್ಥದ ವಿವರಣೆಯನ್ನು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News