ಮೆಹಬೂಬಾ ಮುಫ್ತಿ ಪುತ್ರಿಗೆ ದೊರೆತ ನಿಯಮಿತ ಪಾಸ್‌ಪೋರ್ಟ್

Update: 2023-08-25 17:42 GMT

ಇಲ್ತಿಜಾ ಮುಫ್ತಿ

ಹೊಸದಿಲ್ಲಿ: ಜಮ್ಮುಕಾಶ್ಮೀರದ  ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರಿಗೆ 10 ವರ್ಷಗಳ ವಾಯಿದೆಯಿರುವ ನಿಯಮಿತ ಪಾಸ್‌ಪೋರ್ಟ್ ಅನ್ನು ಶ್ರೀನಗರದಲ್ಲಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ದೇಶಕ್ಕೆ ಪ್ರಯಾಣಿಸಲು ನಿಷೇಧ ವಿಧಿಸದೇ ಇರುವ ಜೊತೆಗೆ ತನ್ನ ಪಾಸ್‌ಪೋರ್ಟ್‌ನ ಅವಧಿಯನ್ನು   ವಿಸ್ತರಿಸಲು ಮಧ್ಯಪ್ರವೇಶಿಸುವಂತೆ ಕೋರಿ ಇಲ್ತಿಜಾ ಮುಪ್ತಿ ಅವರು ಜಮ್ಮುಕಾಶ್ಮೀರ ಹೈಕೋರ್ಟ್‌ನ ಮೊರೆ ಹೋದ ಒಂದು ತಿಂಗಳಿಗೂ ಅಧಿಕ ಸಮಯದ ಬಳಿಕ ಅವರಿಗೆ ನಿಯಮಿತವಾದ ಪಾಸ್‌ಪೋರ್ಟ್ ನೀಡಲಾಗಿದೆ.

ಶ್ರೀನಗರದಲ್ಲಿರುವ  ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಯವರು ತನ್ನ ಕಚೇರಿಯಲ್ಲಿ ಇಲ್ತಿಜಾ ಅವರಿಗೆ 10 ವರ್ಷಗಳ ವಾಯಿದೆಯಿರುವ ನಿಯಮಿತ ಪಾಸ್‌ಪೋರ್ಟ್ ಅನ್ನು  ಹಸ್ತಾಂತರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುಎಇನಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಬಯಸಿರುವ 35 ವರ್ಷದ ಇಲ್ತಿಜಾ ಅವರಿಗೆ  ಈ ಮೊದಲು ನಿರ್ದಿಷ್ಟ ದೇಶಕ್ಕೆ ಮಾತ್ರವೇ ಪ್ರಯಾಣಿಲು  ಅನುಮತಿಯಿರುವ ಪಾಸ್‌ಪೋರ್ಟ್ ಅನ್ನು 2023ರ ಎಪ್ರಿಲ್ 5ರಿಂದ 2025ರ ಎಪ್ರಿಲ್ 4ರವರೆಗೆ ನೀಡಲಾಗಿತ್ತು.

ತನಗೆ ನಿಯಮಿತವಾದ ಪಾಸ್‌ಪೋರ್ಟ್ ಅನ್ನು ನೀಡಬೇಕೆಂದು ಕೋರಿ ಇಲ್ತಿಜಾ ಅವರು  ಫೆಬ್ರವರಿಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಧಾನಿಯ ಶೈಕ್ಷಣಿಕ ಪದವಿ ಬಗ್ಗೆ ಹೇಳಿಕೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News