ಫೆಲೆಸ್ತೀನ್ ಪರ ಪ್ರತಿಭಟನೆಗೆ ಯತ್ನಿಸಿದ ಮೆಹಬೂಬಾ ಮುಫ್ತಿಗೆ ಅಧಿಕಾರಿಗಳ ತಡೆ

Update: 2023-10-24 16:12 GMT

ಮೆಹಬೂಬಾ ಮುಫ್ತಿ | Photo : PTI

ಹೊಸದಿಲ್ಲಿ: ಫೆಲೆಸ್ತೀನ್ ನಾಗರಿಕರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ ಪಿಡಿಪಿ ಪಕ್ಷದ ಅಧ್ಯಕ್ಷ ಮೆಹಬೂಬಾ ಮುಫ್ತಿ ಅವರನ್ನು ಶ್ರೀನಗರದಲ್ಲಿ ಭದ್ರತಾ ಅಧಿಕಾರಿಗಳು ಬಲವಂತವಾಗಿ ಎಳೆದೊಯ್ದಿದ್ದಾರೆಂದು ಅವರ ಪುತ್ರಿ ಇಲ್ತಿಜಾ ಮುಫ್ತಿ ಮಂಗಳವಾರ ಆರೋಪಿಸಿದ್ದಾರೆ.

ಶ್ರೀನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಲೆಸ್ತೀನ್ ಪರವಾಗಿ ಮೆಹಬೂಬಾ ಮುಫ್ತಿ ಪ್ರತಿಭಟನೆ ನಡೆಸಲು ಯತ್ನಿಸಿದಾಗ ಅವರನ್ನು ಭದ್ರತಾ ಅಧಿಕಾರಿಗಳು ಬಲವಂತವಾಗಿ ಎಳೆದೊಯ್ದರು ಎಂದು ಆರೋಪಿಸಿದ್ದಾರೆ. ಸ್ಥಳೀಯ ಆಡಳಿತವು ಯಾಕೆ ಪಿಡಿಪಿಯನ್ನು ನಿರಂತವಾಗಿ ದಮನಿಸುತ್ತಿದೆ. ನಾವು ನಡೆಸುವ ಚಟುವಟಿಕೆಗಳು ಶಾಂತಿಯುತವಾಗಿರುತ್ತವೆ. ಆದರೆ ನೀವು ನಮ್ಮನ್ನು ದೇಶವಿರೋಧಿಗಳೆಂದು ನಿಂದಿಸುತ್ತೀರಿ ಎಂದವರು ಜಮ್ಮುಕಾಶ್ಮೀರ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.

ದೌರ್ಜನ್ಯಗಳಿಂದ ನರಳುತ್ತಿರುವ ಫೆಲೆಸ್ತೀನ್ ನಾಗರಿಕರಿಗೆ ಬೆಂಬಲ ವ್ಯಕ್ತಪಡಿಸಿ ಜಗತ್ತಿನಾದ್ಯಂತ ಜನತೆ ಬೀದಿಗಿಳಿಯುತ್ತಿದ್ದಾರೆ. ಫೆಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ಫಾಸ್ಪರಸ್ ಬಾಂಬ್ ಗಳನ್ನು ಎಸೆಯುತ್ತಿದೆ. ಕಳೆದ ಎರಡು ವಾರಗಳಲ್ಲಿ ಕನಿಷ್ಠ 1500 ಮಕ್ಕಳ ನರಮೇಧ ನಡೆದಿದ ಎಂದು ಇಲ್ತಿಜಾ ಹೇಳಿದರು.

ಫೆಲೆಸ್ತೀನ್ ಮೇಲೆ ಇಸ್ರೇಲಿನ ಆಕ್ರಮಣವನ್ನು ಭಾರತ ಸರಕಾರವು ಖಂಡಿಸಿದೆ. ಮಾನವೀಯತೆ ಕುರಿತ ಅಂತಾರಾಷ್ಟ್ರೀಯ ಇಸ್ರೇಲ್ ಉಲ್ಲಂಘಿಸುತ್ತಿದೆ ಹಾಗೂ ಗಾಝಾದಲ್ಲಿ ವೈದ್ಯಕೀಯ ಮತ್ತು ವಿದ್ಯುತ್ ಪೂರೈಕೆಗಳನ್ನು ಕಡಿತಗೊಳಿಸಿದೆ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News