ಪ್ರಧಾನಿ ಮೋದಿ ಪ್ರಚಾರಕ್ಕೆ ಸಿಂಗಾಪುರದ ರೈಲ್ವೇ ನಿಲ್ದಾಣದ ಚಿತ್ರ ಬಳಸಿದ ಬಿಜೆಪಿ

Update: 2024-05-18 07:44 GMT

Photo:X/@BJP4Bengal

ಹೊಸದಿಲ್ಲಿ: ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬ ಅಪವಾದಗಳಿಗೆ ಪ್ರತ್ಯುತ್ತರವಾಗಿ ಬಿಜೆಪಿಯು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಹರಿಬಿಟ್ಟಿದ್ದು, “ಉದ್ಯೋಗ ಸೃಷ್ಟಿಯಾಗುತ್ತಿಲ್ಲವಾದರೆ, ಮೆಟ್ರೋ ಸೇವೆಗಳು ವಿವಿಧ ನಗರಗಳನ್ನು ತಲುಪಿದ್ದು ಹೇಗೆ?” ಎಂದು ಪ್ರಶ್ನಿಸಿದೆ. 2014 ರಲ್ಲಿ 5 ನಗರಗಳಲ್ಲಿ ಇದ್ದ ಮೆಟ್ರೋ ಸೇವೆಗಳು ಈಗ 20 ನಗರಗಳಿಗೆ ವಿಸ್ತರಿಸಿವೆ. ಎಂದೂ ಬಿಜೆಪಿ ಪ್ರತಿಪಾದಿಸಿದೆ.

ಈ ಪೋಸ್ಟರ್‌ ಅನ್ನು ಬಿಜೆಪಿಯ ತ್ರಿಪುರಾ, ಪಶ್ಚಿಮ ಬಂಗಾಳ ಘಟಕದ ಅಧಿಕೃತ X ಖಾತೆ ಸೇರಿದಂತೆ ಬಿಜೆಪಿಯ ಜಿಲ್ಲಾ-ರಾಜ್ಯ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಿಂದ ಹಂಚಿಕೊಳ್ಳಲಾಗಿದೆ.

ವಾಸ್ತವವೇನು?

ಬಿಜೆಪಿ ಪೋಸ್ಟರ್‌ನಲ್ಲಿ ತೋರಿಸಿರುವ ರೈಲಿನ ಚಿತ್ರವನ್ನು ಆಲ್ಟ್ ನ್ಯೂಸ್ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದು, ಶಾನ್ ಎಂಬ ಛಾಯಾಗ್ರಾಹಕ 'ಅನ್‌ಸ್ಪ್ಲಾಶ್' ಫೋಟೋ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಚಿತ್ರಕ್ಕೆ ಹೋಲಿಕೆ ಕಂಡು ಬಂದಿದೆ.

ಆಲ್ಟ್‌ ನ್ಯೂಸ್‌ ತಂಡವು ಈ ಬಗ್ಗೆ ಇನ್ಸ್ಟಾಗ್ರಾಮ್‌ ಮುಖಾಂತರ ಶಾನ್ ಅವರನ್ನು ಸಂಪರ್ಕಿಸಿದ್ದು, ಚಿತ್ರವು ಸಿಂಗಾಪುರದ ಜುರಾಂಗ್ ಈಸ್ಟ್ ನಿಲ್ದಾಣದ್ದು, ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ. ಬಿಜೆಪಿಯ ಪೋಸ್ಟರ್‌ನಲ್ಲಿ ಬಳಸಲಾದ ಮೆಟ್ರೋ-ರೈಲ್ವೆ ಚಿತ್ರವು ಸಿಂಗಾಪುರದ ರೈಲ್ವೇ ನಿಲ್ದಾಣದ್ದೇ ಹೊರತು ಭಾರತದಲ್ಲ ಎಂಬುದನ್ನು ಇದು ಖಚಿತಪಡಿಸುತ್ತದೆ.



(Photo credit: altnews.in)

 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News