ರಾಜಸ್ಥಾನದಲ್ಲಿ ವಾಯುಪಡೆಯ ತೇಜಸ್‌ ಜೆಟ್‌ ಪತನ

Update: 2024-03-12 09:37 GMT

Photo: NDTV

ಜೈಸಲ್ಮೇರ್: ಭಾರತೀಯ ವಾಯುಪಡೆಯ ತೇಜಸ್‌ ಯುದ್ಧ ವಿಮಾನ ಇಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್‌ ಸಮೀಪ ಪತನಗೊಂಡಿದೆ.

ವಿಮಾನದ ಪೈಲಟ್‌ ಸುರಕ್ಷಿತವಾಗಿ ವಿಮಾನ ಪತನಗೊಳ್ಳುವ ಮೊದಲೇ ಹೊರಬಂದಿದ್ದಾರೆ.

ಈ ಘಟನೆಯ ಕಾರಣವನ್ನು ಪತ್ತೆಹಚ್ಚಲು ಕೋರ್ಟ್‌ ಆಫ್‌ ಎಂಕ್ವಾಯಿರಿ ರಚಿಸಲಾಗಿದೆ ಎಂದು ವಾಯುಪಡೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News