ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನರ ಕೊಡುಗೆ ಗುರುತಿಸಲು ಕಾಂಗ್ರೆಸ್ ವಿಫಲಗೊಂಡಿತ್ತು : ಮೋದಿ

Update: 2024-11-15 15:09 GMT

 ಪ್ರಧಾನಿ ನರೇಂದ್ರ ಮೋದಿ | PC : PTI 

ರಾಂಚಿ : ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಅಂಗವಾಗಿ ಜನಜಾತೀಯ ಗೌರವ ದಿವಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಗುರುತಿಸುವಲ್ಲಿ ಕೇಂದ್ರದಲ್ಲಿಯ ಹಿಂದಿನ ಕಾಂಗ್ರೆಸ್ ಸರಕಾರಗಳು ವಿಫಲಗೊಂಡಿದ್ದವು ಎಂದು ಹೇಳಿದರು. ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್‌ನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು,‘ಎಲ್ಲ ಹೆಗ್ಗಳಿಕೆಯನ್ನು ಕೇವಲ ಒಂದು ಪಕ್ಷ ಮತ್ತು ಒಂದು ಕುಟುಂಬಕ್ಕೆ ನೀಡಲು ಪ್ರಯತ್ನಿಸಲಾಗಿತ್ತು. ಕೇವಲ ಒಂದು ಕುಟುಂಬದಿಂದಾಗಿ ನಮ್ಮ ದೇಶವು ಸ್ವಾತಂತ್ರ್ಯವನ್ನು ಪಡೆದಿದ್ದರೆ ಬಿರ್ಸಾ ಮುಂಡಾ ಏಕೆ ‘ಉಲ್ಗುಲನ್’ ಆಂದೋಲನವನ್ನು ಆರಂಭಿಸಿದ್ದರು ಎಂದು ಪ್ರಶ್ನಿಸಿದರು.

ಭಾರತದ ಬುಡಕಟ್ಟುಸಮುದಾಯ ಈ ಹಿಂದೆ ನ್ಯಾಯವನ್ನು ಪಡೆದಿರಲಿಲ್ಲ ಎಂದು ಹೇಳಿದ ಮೋದಿ, ನಿಸರ್ಗದೊಂದಿಗೆ ತಮ್ಮ ಆಳವಾದ ಸಂಬಂಧ ಮತ್ತು ಪರಿಸರಸ್ನೇಹಿ ಜೀವನಶೈಲಿಗಾಗಿ ಬುಡಕಟ್ಟು ನಾಯಕರನ್ನು ತಾನು ಆರಾಧಿಸುತ್ತೇನೆ ಎಂದರು.

ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಸರಕಾರದ ಯೋಜನೆಗಳ ಕುರಿತು ಮಾತನಾಡಿದ ಅವರು,ಬುಡಕಟ್ಟು ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ತನ್ನ ಸರಕಾರ ರಚಿಸಿದೆ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ 25,000 ಕೋಟಿ ರೂ.ಗಳ ಬಜೆಟ್ ಹಂಚಿಕೆಯನ್ನು 1.25 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News