ಹೆಚ್ಚಿನ ಭಾಗಗಳಿಗೆ ವ್ಯಾಪಿಸಿದ ಮುಂಗಾರು ಮಾರುತ : ಹವಾಮಾನ ಇಲಾಖೆ
Update: 2024-06-08 15:43 GMT
ಹೊಸದಿಲ್ಲಿ : ನೈರುತ್ಯ ಮಾರುತವು ಮಧ್ಯ ಅರಬ್ಬಿ ಸಮುದ್ರದ ಹೆಚ್ಚಿನ ಭಾಗಗಳು, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ, ದಕ್ಷಿಣ ಛತ್ತೀಸ್ಗಢ ಮತ್ತು ದಕ್ಷಿಣ ಒಡಿಶಾದ ಕೆಲವು ಭಾಗಗಳು ಹಾಗೂ ಕರಾವಳಿ ಆಂಧ್ರಪ್ರದೇಶದ ಹೆಚ್ಚುವರಿ ವಲಯಗಳಿಗೆ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.
ಮುಂದಿನ 2-3 ದಿನಗಳಲ್ಲಿ, ಮುಂಗಾರು ಮಾರುತವು ಮಧ್ಯ ಅರಬ್ಬಿ ಸಮುದ್ರದ ಉಳಿದ ಭಾಗಗಳು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹೆಚ್ಚುವರಿ ಪ್ರದೇಶಗಳು ಮತ್ತು ತೆಲಂಗಾಣಕ್ಕೆ ಮುಂದುವರಿಯಲು ಪರಿಸ್ಥಿತಿ ಪೂರಕವಾಗಿದೆ ಎಂದು ಇಲಾಖೆ ಹೇಳಿದೆ.
ಮುಂದಿನ 5 ದಿನಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಾದ್ಯಂತ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಮಹಾರಾಷ್ಟ್ರದಲ್ಲಿ ಜೂನ್ 8ರಿಂದ 11ರವರೆಗೆ ಮತ್ತು ಕರ್ನಾಟಕದಲ್ಲಿ ಜೂನ್ 8ರಿಂದ 9ರವರೆಗೆ ಅಲ್ಲಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ.