ಕಲಾಪದ ವೇಳೆ ನ್ಯಾಯಾಧೀಶರನ್ನು ಮೈ ಲಾರ್ಡ್ ಎನ್ನಬೇಡಿ : ಅಲಹಬಾದ್ ಹೈಕೋರ್ಟ್ ನ ಬಾರ್ ಕೌನ್ಸಿಲ್

Update: 2024-07-11 21:56 IST
ಕಲಾಪದ ವೇಳೆ ನ್ಯಾಯಾಧೀಶರನ್ನು ಮೈ ಲಾರ್ಡ್ ಎನ್ನಬೇಡಿ : ಅಲಹಬಾದ್ ಹೈಕೋರ್ಟ್ ನ ಬಾರ್ ಕೌನ್ಸಿಲ್

 ಅಲಹಬಾದ್ ಹೈಕೋರ್ಟ್ |  PC : PTI 

  • whatsapp icon

ಹೊಸದಿಲ್ಲಿ : ಕಲಾಪದ ವೇಳೆ ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್ಶಿಪ್’ ಎಂದು ಕರೆಯಬಾರದು ಎಂದು ಅಲಹಬಾದ್ ಹೈಕೋರ್ಟ್ ನ ಬಾರ್ ಕೌನ್ಸಿಲ್ ತನ್ನ ಸದಸ್ಯರಿಗೆ ಮನವಿ ಮಾಡಿದೆ.

ನ್ಯಾಯಾಲಯದ ಕಲಾಪದ ವೇಳೆ ಹೀಗೆ ಕರೆಯುವ ಬದಲು ‘ಸರ್’ ಅಥವಾ ‘ಯೂವರ್ ಹಾನರ್’ (‘ಮಾನ್ಯರೇ’) ಎಂದು ಕರೆದರೆ ಸಾಕು ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಂಗ ಕಲಾಪಗಳ ಸಂದರ್ಭದಲ್ಲಿ ‘ಮೈ ಲಾರ್ಡ್ ಮತ್ತು ಯುವರ್ ಲಾರ್ಡ್‌ ಶಿಪ್ಸ್’ ಎಂದು ಪದೇ ಪದೇ ಸಂಬೋಧಿಸುವ ಬಗ್ಗೆ ಸುಪ್ರಿಂ ಕೋರ್ಟ್ ನ ನ್ಯಾಯಧೀಶ ಪಿ.ಎಸ್. ನರಸಿಂಹ ಅವರು ಕಳೆದ ವರ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೇ ಹೇಳುವುದನ್ನು ನಿಲ್ಲಿಸಿದರೆ ತಮ್ಮ ವೇತನದಲ್ಲಿ ಅರ್ಧ ವೇತನ ನೀಡುವುದಾಗಿಯೂ ಅವರು ವಕೀಲರೊಬ್ಬರನ್ನು ಉದ್ದೇಶಿಸಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News