ಸ್ವಾತಂತ್ರ್ಯೋತ್ಸವ ಪರೇಡ್ ಗೆ ರಾಷ್ಟ್ರ ರಾಜಧಾನಿ ಸಜ್ಜು: ಹೊಸದಿಲ್ಲಿಯಲ್ಲಿ ಭದ್ರತಾಪಡೆಗಳ ಸರ್ಪಗಾವಲು
ಹೊಸದಿಲ್ಲಿ: 77ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಜಧಾನಿ ಹೊಸದಿಲ್ಲಿ ಸಜ್ಜುಗೊಂಡಿದ್ದು, ಎಲ್ಲೆಡೆ ಭಾರೀ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನುಹ್ನಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮುಘರ್ಷಣೆಗಳ ಹಿನ್ನೆಲೆಯಲ್ಲಿ ವ್ಯಾಪಕ ಏರ್ಪಾಡುಗಳನ್ನು ಮಾಡಿವೆ. 1 ಸಾವಿರದಷ್ಟು ಮುಖಗುರುತು ಪತ್ತೆಹಚ್ಚುವ ಕ್ಯಾಮರಾಗಳು, ಏರ್ಡ್ರೋನ್ ಗಳು ಹಾಗೂ 10 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಸ್ವಾತಂತ್ರೋತ್ಸವದ ಪರೇಡ್ ನಡೆಯಲಿರುವ ಕೆಂಪುಕೋಟೆ ಹಾಗೂ ರಾಜಧಾನಿಯ ವಿವಿಧೆಡೆ ಸರ್ಪಗಾವಲು ನಡೆಸುತ್ತಿದ್ದಾರೆ.
ಕೋವಿಡ್ 19 ನಿರ್ಬಂಧಗಳನ್ನು ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷ ಸ್ವಾತಂತ್ರೋತ್ಸವವನ್ನು ಪೂರ್ಣಪ್ರಮಾಣದ ಉತ್ಸಾಹದದೊಂದಿಗೆ ಆಚರಿಸಲಾಗುವುದು ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು,ಸುವ್ಯವಸ್ಥೆ) ದೀಪೇಂದ್ರ ಪಾಠಕ್ ತಿಳಿಸಿದ್ದಾರೆ. ಕೆಂಪುಕೋಟೆ ಹಾಗೂ ಇತರ ವ್ಯೆಹಾತ್ಮಕ ಸ್ಥಳಗಳ ಒಳಗೆ ಹಾಗೂ ಹೊರಗೆ ವೀಡಿಯೊ ಅನಾಲಿಟಿಕ್ ಸಿಸ್ಟಮ್ಸ್ ಮತ್ತಿತರ ವ್ಯೆಹಾತ್ಮಕ ಸ್ಥಳಗಳನ್ನು ಅವು ಒಳಗೊಂಡಿವೆ. ಡ್ರೋನ್ ವಿರೋಧಿ ಸಿಸ್ಟಮ್ಸ್ ಗಳು, ಏರ್ ಡಿಫೆನ್ಸ್ ಗನ್ ಗಳ ನಿಯೋಜನೆ, ಸೈಪರ್ ಪಡೆ ಹಾಗೂ ಉನ್ನತಮಟ್ಟದ ಸ್ವಾಟ್ ಕಮಾಂಡೋಗಳು ಹಾಗೂ ಶಾರ್ಪ್ಶೂಟರ್ಗಳ ನಿಯೋಜನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ನಿರೋಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದಿಲ್ಲಿ ನಗರಾದ್ಯಂತ ಭದ್ರತಾಪಡೆಗಳ ಕಾವಲು ಬಿಗಿಗೊಂಡಿದೆ ಹಾಗೂ ವಿಧ್ವಂಸಕ ವಿರೋಧಿ ತಪಾಸಣೆಗಳನ್ನು ತೀವ್ರಗೊಳಿಸಿದೆ. ಹೊಟೇಲ್ಗಳು, ಅತಿಥಿಗೃಹಗಳು, ಪಾರ್ಕಿಂಗ್ ಸ್ಥಳಗಳು ಹಾಗೂ ರೆಸ್ಟಾರೆಂಟ್ಗಳ ತಪಾಸಣೆ ನಡೆಸಲಾಗುತ್ತಿದೆ ಹಾಗೂ ಅವುಗಳಲ್ಲಿ ವಾಸ್ತವ್ಯ ಹೂಡಿರುವವರು ಹಾಗೂ ಕೆಲಸಗಾರರ ಗುರುತುಗಳನ್ನು ದೃಢಪಡಿಸಲಾಗುತ್ತಿದೆ.
ರಾಜಘಾಟ್,ಐಟಿಓ ಹಾಗೂ ಕೆಂಪುಕೋಟೆಯಂತಹ ಪ್ರಮುಖ ಪ್ರದೇಶಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಸೋಮವಾರ ರಾತ್ರಿಯಿಂದ ನೊಯ್ಡಿ ಹಾಗೂ ಗಾಝಿಯಾಬಾದ್ ಮಾರ್ಗವಾಗಿ ದಿಲ್ಲಿಗೆ ಬರುವ ಎಲ್ಲಾ ವಾಣಿಜ್ಯ ಹಾಗೂ ಘನ ವಾಹನಗಳನ್ನು ನಿಷೇಧಿಸಲಾಗಿದೆ.
ನಗರದಲ್ಲಿ ಸಾರಿಗೆ ಸಂಚಾರವನ್ನು ನಿಯಂತ್ರಿಸಲು 3 ಸಾವಿರಕ್ಕೂ ಅಧಿಕ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ.