ರಾಮ ಭಜನೆ ಹಾಡಿದ ಫಾರೂಖ್‌ ಅಬ್ದುಲ್ಲಾ: ವೀಡಿಯೊ ವೈರಲ್‌

Update: 2024-04-06 08:01 GMT

Photo: x (@ians_india)

ಹೊಸದಿಲ್ಲಿ: ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಮತ್ತು ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಖ್‌ ಅಬ್ದುಲ್ಲಾ ಅವರು ರಾಮ ಭಜನೆ ಹಾಡುತ್ತಿರುವ ವೀಡಿಯೊವೊಂದು ವೈರಲ್‌ ಆಗಿದೆ.

ಸುದ್ದಿ ಸಂಸ್ಥೆ ಐಎಎನ್‌ಎಸ್‌ ಈ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ಫಾರೂಖ್‌ ಅಬ್ದುಲ್ಲಾ ಅವರು “ದುಂಢೋ ಮೋರೆ ರಾಮ್”‌ ಎಂಬ ಜನಪ್ರಿಯ ಭಜನೆಯನ್ನು ಹಾಡುವುದು ಕೇಳಿಸುತ್ತದೆ.

ಜಮ್ಮು ಕಾಶ್ಮೀರದ ಕತ್ರಾ ಎಂಬಲ್ಲಿನ ಕಾರ್ಯಕ್ರಮದಲ್ಲಿ ಅವರು ಈ ಭಜನೆ ಹಾಡಿದ್ದಾರೆನ್ನಲಾಗಿದ್ದು ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

“ಕತ್ರಾ: ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಖ್‌ ಅಬ್ದುಲ್ಲಾ ಅವರು ರಾಮ ಭಜನೆ ಹಾಡುತ್ತಿದ್ದಾರೆ,” ಎಂಬ ಶೀರ್ಷಿಕೆಯನ್ನು ವೀಡಿಯೊದೊಂದಿಗೆ ನೀಡಲಾಗಿದೆ. ಎಪ್ರಿಲ್‌ 5ರಂದು ಪೋಸ್ಟ್‌ ಮಾಡಲಾದ ಈ ವೀಡಿಯೊವನ್ನು ಈಗಾಗಲೇ ಎಕ್ಸ್‌ ನಲ್ಲಿ 2.5 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

ಆದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪೋಸ್ಟ್‌ ಮಾಡಲಾದ ಈ ವೀಡಿಯೊಗೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News