ನೀವು ಏನನ್ನು ಓದಬೇಕು, ವೀಕ್ಷಿಸಬೇಕು ಎನ್ನುವುದನ್ನು ಏಕಸ್ವಾಮ್ಯವಾದಿಗಳು ನಿರ್ಧರಿಸುತ್ತಿದ್ದಾರೆ: ರಾಹುಲ್ ಗಾಂಧಿ

Update: 2024-11-06 11:44 GMT
ರಾಹುಲ್‌ ಗಾಂಧಿ (PTI)

ಹೊಸದಿಲ್ಲಿ: ಏಕಸ್ವಾಮ್ಯವಾದಿಗಳ ನೂತನ ತಳಿಯು ದೇಶದ ಆಡಳಿತ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ.

ಈ ‘ಅಲ್ಪಾಧಿಪತ್ಯದ ಗುಂಪು’ಗಳಿಂದಾಗಿ ಲಕ್ಷಾಂತರ ಉದ್ಯಮಗಳು ನಾಶಗೊಂಡಿವೆ ಮತ್ತು ಉದ್ಯೋಗ ಸೃಷ್ಟಿ ಕಠಿಣವಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ಸಂಪಾದಕೀಯದಲ್ಲಿ ರಾಹುಲ್ ಬರೆದಿದ್ದಾರೆ.

ಹೆಚ್ಚುತ್ತಿರುವ ಅಸಮಾನತೆಯ ನಡುವೆ ಈ ‘ಮ್ಯಾಚ್-ಫಿಕ್ಸಿಂಗ್’ ಏಕಸ್ವಾಮ್ಯವಾದಿ ಗುಂಪುಗಳು ಅಪಾರ ಸಂಪತ್ತನ್ನು ಕೂಡಿ ಹಾಕಿವೆ ಎಂದು ಅವರು ಹೇಳಿದ್ದಾರೆ.

ಮೂಲ ಈಸ್ಟ್‌ಇಂಡಿಯಾ ಕಂಪನಿಯು 150 ವರ್ಷಗಳ ಹಿಂದೆ ಮುಚ್ಚಿಕೊಂಡಿತ್ತು,ಆದರೆ ಆಗಿನ ಭೀತಿ ಈಗ ಮರಳಿ ಸೃಷ್ಟಿಯಾಗಿದೆ. ಏಕಸ್ವಾಮ್ಯವಾದಿಗಳ ನೂತನ ತಳಿ ಅದರ ಸ್ಥಾನದಲ್ಲಿ ತಲೆಯೆತ್ತಿದೆ. ಭಾರತವು ಇತರ ಪ್ರತಿಯೊಬ್ಬರಿಗೂ ಹೆಚ್ಚು ಅಸಮಾನ ಮತ್ತು ಅನ್ಯಾಯಯುತವಾಗಿರುವಾಗ ಅವರು ಅಪಾರ ಸಂಪತ್ತನ್ನು ಗಳಿಸಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಅಭಿಪ್ರಾಯವು ಇತ್ತೀಚಿನ ತಿಂಗಳುಗಳಲ್ಲಿ ಬಿಜೆಪಿಯ ‘ಏಕಸ್ವಾಮ್ಯ ಮಾದರಿ’ಯ ವಿರುದ್ಧ ಅವರ ದಾಳಿಗೆ ಅನುಗುಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರವು ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಧ್ವಂಸಗೊಳಿಸಿರುವ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗಿರುವ ‘ಏಕಸ್ವಾಮ್ಯ ಮಾದರಿ’ಯ ಆಡಳಿತ ನಡೆಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದರು.

ಭಾರತದ ನೂರಾರು ಯಶಸ್ವಿ ಮತ್ತು ಉತ್ಸಾಹಿ ಉದ್ಯಮ ನಾಯಕರು ಈ ಏಕಸ್ವಾಮ್ಯವಾದಿಗಳ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ತನ್ನ ಸಂಪಾಕೀಯದಲ್ಲಿ ಪ್ರತಿಪಾದಿಸಿರುವ ಅವರು,ಭಾರತ ಮಾತೆ ತನ್ನ ಎಲ್ಲ ಮಕ್ಕಳಿಗೂ ತಾಯಿಯಾಗಿದ್ದಾಳೆ. ಅವಳ ಸಂಪನ್ಮೂಲಗಳು ಮತ್ತು ಶಕ್ತಿಯ ಏಕಸ್ವಾಮ್ಯವು,ಆಯ್ದ ಕೆಲವೇ ಜನರಿಗಾಗಿ ಇತರರಿಗೆ ನಿರಾಕರಣೆ ಆಕೆಗೆ ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಈ ಏಕಸ್ವಾಮ್ಯವಾದಿಗಳೊಂದಿಗೆ ಪೈಪೋಟಿಯು ಭಾರತ ಸರಕಾರದ ಆಡಳಿತ ಯಂತ್ರದ ವಿರುದ್ಧ ಹೋರಾಟಕ್ಕೆ ಸಮನಾಗಿದೆ. ಅವರ ಮುಖ್ಯ ಸಾಮರ್ಥ್ಯ ಉತ್ಪನ್ನಗಳು,ಬಳಕೆದಾರರು ಅಥವಾ ಪರಿಕಲ್ಪನೆಗಳಲ್ಲ,ಭಾರತದ ಆಡಳಿತ ಸಂಸ್ಥೆಗಳನ್ನು ನಿಯಂತ್ರಿಸುವ ಅವರ ತಾಕತ್ತು ಆಗಿದೆ. ನಿಮಗಿಂತ ಭಿನ್ನವಾಗಿ ಈ ಗುಂಪುಗಳು ಭಾರತೀಯರು ಏನನ್ನು ಓದಬೇಕು ಮತ್ತು ವೀಕ್ಷಿಸಬೇಕು ಎನ್ನುವುದನ್ನು ನಿರ್ಧರಿಸುತ್ತವೆ,ಅವು ಭಾರತೀಯರು ಹೇಗೆ ಯೋಚಿಸುತ್ತಾರೆ ಮತ್ತು ಏನನ್ನು ಮಾತನಾಡುತ್ತಾರೆ ಎನ್ನುವುದರ ಮೇಲೆ ಪ್ರಭಾವ ಬೀರುತ್ತವೆ, ಇಂದು ಮಾರುಕಟ್ಟೆ ಶಕ್ತಿಗಳು ಯಶಸ್ಸನ್ನು ನಿರ್ಧರಿಸುವುದಿಲ್ಲ,ಅಧಿಕಾರ ಸಂಬಂಧಗಳು ಅದನ್ನು ಮಾಡುತ್ತವೆ ಎಂದು ರಾಹುಲ್ ಒತ್ತಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News