ಮೋದಿ ಆಡಳಿತದಲ್ಲಿ ನ್ಯಾಯ ಕೇಳುವ ಸಹೋದರಿಯರ ಕುಟುಂಬವನ್ನೇ ನಾಶ ಮಾಡುತ್ತಾರೆ: ಪ್ರಿಯಾಂಕಾ ಗಾಂಧಿ

Update: 2024-05-28 15:07 GMT

 ಪ್ರಿಯಾಂಕಾ ಗಾಂಧಿ | PC : ANI

ಭೋಪಾಲ: ಮಧ್ಯಪ್ರದೇಶದಲ್ಲಿ ಅತ್ಯಾಚಾರ ಸಂತ್ರಸ್ತೆ ಮಹಿಳೆಯೊಬ್ಬರು ಆ್ಯಂಬುಲೆನ್ಸ್ ನಿಂದ ಬಿದ್ದು ಮೃತಪಟ್ಟಿರುವ ಘಟನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನಮ್ಮ ಸಹೋದರಿಯರು ನ್ಯಾಯ ಕೇಳುವಾಗಲೆಲ್ಲ ಅವರ ಕಟುಂಬಗಳನ್ನೇ ನಾಶ ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

‘‘ಮಧ್ಯಪ್ರದೇಶದಲ್ಲಿ ದಲಿತ ಸಹೋದರಿ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯವು ಹೃದಯ ವಿದ್ರಾವಕವಾಗಿದೆ. ಬಿಜೆಪಿಯವರು ಸಂವಿಧಾನದ ಹಿಂದೆ ಬಿದ್ದಿದ್ದಾರೆ. ಯಾಕೆಂದರೆ ಅವರಿಗೆ ಈ ದೇಶದ ಮಹಿಳೆಯರು, ದಲಿತರು, ಬುಡಕಟ್ಟು ಜನರು ಮತ್ತು ಹಿಂದುಗಳಿದ ವರ್ಗಗಳ ಜನರು ಘನತೆಯೊಂದಿಗೆ ಬದುಕುವುದು ಬೇಕಾಗಿಲ್ಲ. ಹಾಗಾಗಿ, ಅವರ ದೂರುಗಳನ್ನು ಯಾರೂ ಕೇಳುವುದಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ದಿಲ್ಲಿಯ ಕುಸ್ತಿ ಪಟು ಸಹೋದರಿಯರಾಗಿರಲಿ, ಹತ್ರಾಸ್-ಉನ್ನಾವೊದ ಸಂತ್ರಸ್ತರಾಗಿರಲಿ ಅಥವಾ ಮಧ್ಯಪ್ರದೇಶದ ಈ ಬರ್ಬರ ಘಟನೆಯಾಗಲಿ, ಮಹಿಳೆಯರ ಮೇಲೆ ಹಿಂಸೆ ನಡೆದಾಗಲೆಲ್ಲ ನರೇಂದ್ರ ಮೋದೀಜಿ ಮತ್ತು ಅವರ ಸರಕಾರದವರು ಆರೋಪಿಗಳನ್ನು ರಕ್ಷಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಸಹೋದರಿಯರು ನ್ಯಾಯ ಕೇಳಿದರೆ, ಅವರ ಕುಟುಂಬಗಳನ್ನೇ ನಾಶಪಡಿಸಲಾಗಿದೆ’’ ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News