'ಮಿಸ್ ಇಂಡಿಯಾʼ ಪಟ್ಟಿಯಲ್ಲಿ ದಲಿತ, ಆದಿವಾಸಿಗಳೇ ಇಲ್ಲ: ರಾಹುಲ್ ಗಾಂಧಿ ಆರೋಪ

Update: 2024-08-25 06:36 GMT

Photo:X/@ANI

ಪ್ರಯಾಗರಾಜ್ : ಇದುವರೆಗಿನ ಮಿಸ್ ಇಂಡಿಯಾದ ಪಟ್ಟಿಯನ್ನು ಪರಿಶೀಲಿಸಿದ್ದೇನೆ. ವಿಜೇತರ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಅಥವಾ ಒಬಿಸಿ ಸಮುದಾಯದ ಯಾರೂ ಕಂಡುಬಂದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ರಾಷ್ಟ್ರವ್ಯಾಪಿ "ಜಾತಿ ಗಣತಿ"ಗಾಗಿ ಒತ್ತಾಯಿಸಲು ಶನಿವಾರ ನಡೆದ 'ಸಂವಿಧಾನ ಸಮ್ಮಾನ್ ಸಮ್ಮೇಳನ'ದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಈ ಹೇಳಿಕೆಯನ್ನು ನೀಡಿದರು.

"ಶೇ 90 ರಷ್ಟು" ಜನರ ಭಾಗವಹಿಸುವಿಕೆ ಇಲ್ಲದೆ ದೇಶವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಾನು ದಲಿತ, ಆದಿವಾಸಿ (ಬುಡಕಟ್ಟು) ಅಥವಾ ಒಬಿಸಿ ಮಹಿಳೆಯರನ್ನು ಹೊಂದಿರದ ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದ್ದೇನೆ. ಕೆಲವರು ಕ್ರಿಕೆಟ್ ಅಥವಾ ಬಾಲಿವುಡ್ ಬಗ್ಗೆ ಮಾತನಾಡುತ್ತಾರೆ. ಯಾರೂ ಚಮ್ಮಾರ ಅಥವಾ ಪ್ಲಂಬರ್ ಗಳನ್ನು ತೋರಿಸುವುದಿಲ್ಲ. ಮಾಧ್ಯಮದ ಉನ್ನತ ಆಂಕರ್‌ಗಳಲ್ಲೂ ಆದಿವಾಸಿ ಅಥವಾ ದಲಿತ ಸಮುದಾಯದವರು ಇಲ್ಲ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಪ್ರಧಾನಿ ಮೋದಿ ಯಾರನ್ನಾದರೂ ಅಪ್ಪಿಕೊಂಡರೆ ನಾವು ಸೂಪರ್ ಪವರ್ ಆಗಿದ್ದೇವೆ ಎಂದು ಮಾಧ್ಯಮಗಳು ಹೇಳುತ್ತವೆ. ಈ ದೇಶದ 90 ರಷ್ಟು ಜನರ ಪ್ರತಿನಿಧಿಗಳೇ ಇಲ್ಲದಾಗ ನಾವು ಹೇಗೆ ಸೂಪರ್ ಪವರ್ ಆಗಿದ್ದೇವೆ?" ಎಂದು ದೇಶದ ಮುಖ್ಯವಾಹಿನಿಯ ಮಾಧ್ಯಮಗಳ ಮೇಲೆ ವಾಗ್ದಾಳಿ ನಡೆಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕರು ಜಾತಿ ಜನಗಣತಿಯ ಬೇಡಿಕೆಯೊಂದಿಗೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಬಹುದು ಎಂದು ರಾಹುಲ್ ಆರೋಪಿಸಿದರು.

"ಸಂಸ್ಥೆಗಳು, ಕಾರ್ಪೊರೇಟ್‌ಗಳು, ಬಾಲಿವುಡ್, ಮಿಸ್ ಇಂಡಿಯಾದಲ್ಲಿ ಶೇಕಡಾ 90 ರಷ್ಟು ಹಿಂದುಳಿದ ಸಮುದಾಯದ ಮಂದಿ ಇದ್ದಾರೆಯೇ ಎಂಬುದನ್ನು ನೋಡಬೇಕು. ಶೇಕಡಾ 90 ರಷ್ಟು ಭಾಗಿದಾರಿಕೆ ಹೊಂದಿಲ್ಲ ಎಂದು ಹೇಳುತ್ತಿದ್ದೇನೆ. ಇದನ್ನು ಬೇಕಾದರೆ ಪರಿಶೀಲಿಸಿ" ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News