ಅಸ್ಸಾಂ ವಿಧಾನಸಭೆ| ಶುಕ್ರವಾರ 2 ಗಂಟೆಗಳ ನಮಾಝ್ ವಿರಾಮ ರದ್ದು: ಸಿಎಂ ಹಿಮಂತ ಬಿಸ್ವಾ ಶರ್ಮಾ
Update: 2024-08-30 10:09 GMT
ಗುವಾಹಟಿ: ಶುಕ್ರವಾರದಂದು ಎರಡು ಗಂಟೆಗಳ ನಮಾಝ್ ವಿರಾಮವನ್ನು ರದ್ದುಗೊಳಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ ಘೋಷಿಸಿದ್ದಾರೆ.
ಯಾವುದೇ ಧಾರ್ಮಿಕ ವಿಚಾರಗಳಿಲ್ಲದೆ ವಿಧಾನಸಭೆ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಒತ್ತಿ ಹೇಳಿದ್ದಾರೆ.
ಈ ನಿರ್ಧಾರವು ಮುಸ್ಲಿಂ ಶಾಸಕರು ಮತ್ತು ಸಿಬ್ಬಂದಿಗೆ ಶುಕ್ರವಾರದ ನಮಾಝ್ ನಿರ್ವಹಿಸಲು ನೀಡುತ್ತಿದ್ದ ವಿರಾಮಕ್ಕೆ ತಡೆ ನೀಡಲಿದೆ.