ನೊಯ್ಡಾ ಎಕ್ಸ್ ಪ್ರೆಸ್ ವೇ : ರೈತರ ಪ್ರತಿಭಟನೆ ಅಂತ್ಯ

Update: 2024-02-08 15:44 GMT

Photo: PTI 

ಹೊಸದಿಲ್ಲಿ: ನೊಯ್ಡಾ ಎಕ್ಸ್ ಪ್ರೆಸ್ ವೇ ನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದ ರೈತರು ತಮ್ಮ ಬೇಡಿಕೆಗಳನ್ನು ಆಲಿಸುವುದಾಗಿ ಪೋಲಿಸರು ಮತ್ತು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಗುರುವಾರ ಸಂಜೆ ತಮ್ಮ ಆಂದೋಲನವನ್ನು ಅಂತ್ಯಗೊಳಿಸಿದರು. ಪರಿಣಾಮವಾಗಿ ಆರು ಗಂಟೆಗಳ ಕಾಲ ಮುಚ್ಚಲ್ಪಟ್ಟಿದ್ದ ನೊಯ್ಡಾ-ದಿಲ್ಲಿ ರಸ್ತೆಯು ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ.

ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಈ ಹಿಂದೆ ಸ್ವಾಧೀನಪಡಿಸಿಕೊಂಡಿರುವ ತಮ್ಮ ಭೂಮಿಗೆ ಬದಲಾಗಿ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಗೊಳಿಸಿದ ನಿವೇಶನದ ಬೇಡಿಕೆಯೊಂದಿಗೆ ನೊಯ್ಡಾ ಮತ್ತು ಗ್ರೇಟರ್ ನೊಯ್ಡಾದ ರೈತರು ಡಿಸೆಂಬರ್ 2023ರಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News