ಕೋಲ್ಕತಾದ ಎಸ್‌ಆರ್‌ಎಫ್‌ಟಿಐ ಅಧ್ಯಕ್ಷರಾಗಿ ಸುರೇಶ್ ಗೋಪಿ ನಾಮನಿರ್ದೇಶನ

Update: 2023-09-22 17:10 GMT

ಸುರೇಶ್ ಗೋಪಿ | X \ @TheSureshGopi 

ಹೊಸದಿಲ್ಲಿ: ಕೋಲ್ಕತಾ ಮೂಲದ ಸತ್ಯಜಿತ್ ರೇ ಫಿಲ್ಮ್ ಆ್ಯಂಡ್ ಟೆಲಿವಿಶನ್ ಇನ್ಸ್‌ಟಿಟ್ಯೂಟ್ (ಎಸ್‌ಆರ್‌ಎಫ್‌ಟಿಐ)ನ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಚೇರ್‌ಮನ್ ಆಗಿ ಮಲಯಾಳಂನ ಖ್ಯಾತ ಚಲನಚಿತ್ರ ನಟ-ರಾಜಕಾರಣಿ ಸುರೇಶ್ ಗೋಪಿ ಅವರನ್ನು ಕೇಂದ್ರ ಸರಕಾರ ನಾಮನಿರ್ದೇಶನಗೊಳಿಸಿದೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸಾಮಾಜಿಕ ಜಾಲತಾಣ xನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು, ಸುರೇಶ್‌ಗೋಪಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಹಿರಿಯ ನಟ ಸುರೇಶ್ ಗೋಪಿಯವರ ಅಗಾಧವಾದ ಅನುಭವ ಹಾಗೂ ಸಿನೆಮಾ ಪ್ರತಿಭೆಯು ಈ ಘನವೆತ್ತ ಸಂಸ್ಥೆಯನ್ನು ಸಮೃದ್ಧಗೊಳಿಸಲಿದೆ’’ ಎಂಬ ಭರವಸೆಯನ್ನು ಠಾಕೂರ್ ವ್ಯಕ್ತಪಡಿಸಿದ್ದಾರೆ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಟ ಸುರೇಶ್ ಗೋಪಿ ಅವರು ಕಳಿಯಾಟ್ಟಂ, ಮಣಿಚಿತ್ರತ್ತಾಳು, ಕಮೀಶನರ್ ಹಾಗೂ ಪಾಪನ್ ಚಿತ್ರಗಳು ಅತ್ಯಂತ ಜನಪ್ರಿಯವಾಗಿದ್ದವು. ಸುರೇಶ್ ಗೋಪಿ ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯರು.

ಸುರೇಶ್ ಗೋಪಿ ಅವರು ಶಿವರಾತ್ರಿ ಸಂದರ್ಭ ಎರ್ನಾಕುಳಂ ಜಿಲ್ಲೆಯ ದೇವಾಲಯವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಸ್ತಿಕರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News