4 ರಾಜ್ಯಗಳ ನೂತನ ವಿಧಾನಸಭೆಗಳಲ್ಲಿ ಏರಿಕೆಯಾಗದ ಮಹಿಳಾ ಶಾಸಕಿಯರ ಸಂಖ್ಯೆ

Update: 2023-12-04 11:21 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಛತ್ತೀಸ್ಗಢ, ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭೆಗಳಲ್ಲಿ ಮಹಿಳಾ ಶಾಸಕಿಯರ ಸಂಖ್ಯೆ ಸಂಸತ್ತು ಇತ್ತೀಚೆಗೆ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ನಿಗದಿಗೊಳಿಸಲಾಗಿರುವ ಶೇ.33ಕ್ಕಿಂತ ಕಡಿಮೆಯಾಗಿದೆ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಗ್ರಹಿಸಿದ ಡೇಟಾ ತಿಳಿಸಿದೆ. ಆದರೆ ಮೂರೂ ರಾಜ್ಯಗಳಲ್ಲಿ ಕಳೆದ ಚುನಾವಣೆಗೆ ಹೋಲಿಸಿದಾಗ ಈ ಬಾರಿ ಆಯ್ಕೆಯಾದ ಮಹಿಳೆಯರ ಸಂಖ್ಯೆಯಲ್ಲಿ ಅಲ್ಪ ಏರಿಕೆಯಾಗಿದೆ.

ಛತ್ತೀಸಗಢದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರ ಪೈಕಿ ಶೇ. 21ರಷ್ಟು ಮಂದಿ ಮಹಿಳೆಯರಾಗಿದ್ದಾರೆ. 2018ರಲ್ಲಿ ರಾಜ್ಯದಲ್ಲಿ 13 ಶಾಸಕಿಯರಿದ್ದರೆ ಈಗ ಆ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ತೆಲಂಗಾಣದಲ್ಲಿ 2018ರಲ್ಲಿ ಆರು ಮಹಿಳಾ ಶಾಸಕಿಯರಿದ್ದರೆ ಆ ಸಂಖ್ಯೆ ಈಗ 10ಕ್ಕೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ 2018ರಲ್ಲಿ 24 ಶಾಸಕಿಯರಿದ್ದರೆ ಈ ಬಾರಿ ಅದು 20ಕ್ಕೆ ಇಳಿಕೆಯಾಗಿದೆ.

ಮಧ್ಯಪ್ರದೇಶದಲ್ಲಿ 2013ರಲ್ಲಿ 30 ಶಾಸಕಿಯರು ಆಯ್ಕೆಯಾಗಿದ್ದರೆ 2018ರಲ್ಲಿ 21 ಮಂದಿ ಆಯ್ಕೆಯಾಗಿದ್ದರು. ಈ ಬಾರಿ 27 ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ.

ಛತ್ತೀಸಗಢದ ಹೊಸ ವಿಧಾನಸಭೆಯಲ್ಲಿ 55 ವರ್ಷ ಮೇಲ್ಪಟ್ಟ ಶಾಸಕರ ಪ್ರಮಾಣ ಶೇ43ರಷ್ಟಿದೆ. 2008ರಲ್ಲಿ ಈ ಪ್ರಮಾಣ ಶೇ 16ರಷ್ಟಿತ್ತು ಹಾಗೂ 2013ರಲ್ಲಿ ಶೇ 29ಕ್ಕೆ ಏರಿಕೆಯಾಗಿ 2018ರಲ್ಲಿ ಶೇ40ರಷ್ಟಿತ್ತು.

ಮಧ್ಯಪ್ರದೇಶದಲ್ಲಿ ಈ ಬಾರಿ ಶೇ 50ರಷ್ಟು ಶಾಸಕರು 55 ವರ್ಷ ಮೇಲ್ಪಟ್ಟವರಾಗಿದ್ದಾರೆ, 2018ರಲ್ಲಿ ಈ ಪ್ರಮಾಣ ಶೇ 38 ಆಗಿತ್ತು.

ರಾಜಸ್ಥಾನದಲ್ಲಿ 2018ರಲ್ಲಿ 55 ವರ್ಷ ಮೇಲ್ಪಟ್ಟ ಶಾಸಕರ ಪ್ರಮಾಣ ಶೇ 48 ಆಗಿದ್ದರೆ ಈ ಬಾರಿ ಶೇ 46 ಆಗಿದೆ.

ತೆಲಂಗಾಣದಲ್ಲಿ 55 ವರ್ಷ ಮೇಲ್ಪಟ್ಟ ಶಾಸಕರ ಪ್ರಮಾಣ ಈ ಬಾರಿ ಶೇ 60 ಆಗಿದ್ದರೆ ಕಳೆದ ಬಾರಿ ಈ ಪ್ರಮಾಣ ಶೇ 39 ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News