ಗಮನ ಸೆಳೆದ ಒಡಿಶಾ ಪೊಲೀಸರ ʼಇಮೋಜಿ ಕ್ರಿಯೇಟಿವಿಟಿʼ!

Update: 2024-11-10 08:33 GMT

Photo credit:X/@SP_BERHAMPUR

ಭುವನೇಶ್ವರ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಚಿತ್ರವನ್ನು ವಿನೂತನವಾಗಿ ಹಂಚಿಕೊಂಡಿರುವ ಒಡಿಶಾದ ಬೆರ್ಹಾಂಪುರ ಪೊಲೀಸರ ಕ್ರಮ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ.

ಸಾಮಾನ್ಯವಾಗಿ ಅಪರಾಧ ಪ್ರರಣಗಳಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಮುಖಗಳನ್ನು ಮರೆ ಮಾಚಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಪೊಲೀಸರು ಮುಖಗವಸುಗಳನ್ನು ಬಳಸಿದರೆ, ಇನ್ನೂ ಕೆಲ ಪೊಲೀಸರು ಆರೋಪಿಗಳ ಮುಖವನ್ನು ಬ್ಲರ್‌ ಮಾಡಿ ಹಂಚಿಕೊಳ್ಳುತ್ತಾರೆ. ಆದರೆ, ಭುವನೇಶ್ವರ ಪೊಲೀಸರು ಆರೋಪಿಗಳ ಮುಖಕ್ಕೆ ಇಮೋಜಿಗಳನ್ನು ಬಳಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆದಿದೆ.

ತಂದೆ-ಮಗನನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆರ್ಹಾಂಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ನಾಲ್ವರ ಚಿತ್ರವನ್ನು ಹಂಚಿಕೊಳ್ಳುವಾಗ ಆರೋಪಿಗಳ ಮುಖಸ್ಥಿತಿಯನ್ನು ಬಿಂಬಿಸುವಂತೆಯೇ ಇರುವ ಇಮೋಜಿಗಳನ್ನು ಆಯ್ದುಕೊಂಡಿರುವ ಪೊಲೀಸರ ಸೃಜನಶೀಲತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಆರೋಪಿಯೊಬ್ಬನ ಚಿತ್ರವನ್ನು ಇದೇ ರೀತಿಯಾಗಿ ಬೆರ್ಹಾಂಪುರ ಪೊಲೀಸರು ಹಂಚಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News