ಒಡಿಶಾ ವಿವಿ ಕುಲಪತಿಗೇ 14 ಲಕ್ಷ ರೂ.ಗಳ ‘ಡಿಜಿಟಲ್ ಅರೆಸ್ಟ್’ ವಂಚನೆ!

Update: 2025-04-13 22:02 IST
ಒಡಿಶಾ ವಿವಿ ಕುಲಪತಿಗೇ 14 ಲಕ್ಷ ರೂ.ಗಳ ‘ಡಿಜಿಟಲ್ ಅರೆಸ್ಟ್’ ವಂಚನೆ!

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಬೆರ್ಹಾಂಪುರ: ಒಡಿಶಾದ ಬೆರ್ಹಾಂಪುರ ವಿವಿಯ ಕುಲಪತಿ ಗೀತಾಂಜಲಿ ದಾಸ್ ಅವರಿಗೆ 14 ಲ.ರೂ.ಗಳನ್ನು ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಗುಜರಾತಿನಿಂದ ಬಂಧಿಸಲಾಗಿದೆ ಎಂದು ಪೋಲಿಸರು ರವಿವಾರ ತಿಳಿಸಿದರು.

ದಾಸ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು ತಮ್ಮನ್ನು ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು ಮತ್ತು ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು.

ದಾಸ್ ಅವರನ್ನು ಫೆ.14ರಿಂದ 22ರವರೆಗೆ ‘ಡಿಜಿಟಲ್ ಬಂಧನ’ದಲ್ಲಿ ಇರಿಸಿದ್ದ ಆರೋಪಿಗಳು, ಆದ್ಯತೆಯ ತನಿಖೆಗಾಗಿ ತಾವು ಸೂಚಿಸಿದ್ದ ಬ್ಯಾಂಕ್ ಖಾತೆಗೆ ಅವರ ಬಳಿಯಿರುವ ಎಲ್ಲ ಹಣವನ್ನು ಜಮೆ ಮಾಡುವಂತೆ ಸೂಚಿಸಿದ್ದರು. ಅದರಂತೆ ದಾಸ್ ಅವರಿಗೆ 14 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು.

ಅಂತಿಮವಾಗಿ ದಾಸ್ ಅವರಿಗೆ 80,000 ರೂ.ಗಳನ್ನು ಮರಳಿಸಿದ್ದ ಆರೋಪಿಗಳು ಉಳಿದ ಹಣವನ್ನು ಪರಿಶೀಲನೆಯ ಬಳಿಕ ಮರಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ತನಗೆ ಹಣ ವಾಪಸಾಗದಿದ್ದಾಗ ದಾಸ್ ಫೆ.24ರಂದು ಪೋಲಿಸ್ ದೂರನ್ನು ದಾಖಲಿಸಿದ್ದರು.

ತನಿಖೆಯನ್ನು ಕೈಗೊಂಡ ಪೋಲಿಸರು ಕಳೆದ ವಾರ ಗುಜರಾತಿನ ಭಾವನಗರದಲ್ಲಿ ಭುಟೈಯಾ ಜೆನಿಲ್ ಜಯಸುಖಭಾಯಿ(23) ಮತ್ತು ವಿಶ್ವಜೀತಸಿನ್ಹ ಗೋಹಿಲ್(21) ಎನ್ನುವವರನ್ನು ಬಂಧಿಸಿದ್ದು,ಶನಿವಾರ ಅವರನ್ನು ಬೆರ್ಹಾಂಪುರಕ್ಕೆ ಕರೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪೋಲಿಸರು ಆರೋಪಿಗಳಿಂದ ಮೊಬೈಲ್ ಫೋನ್‌ಗಳು,ಆಧಾರ್ ಕಾರ್ಡ್‌ಗಳು ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ದೇಶದ ವಿವಿಧ ಭಾಗಗಳಲ್ಲಿ ಹಲವಾರು ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರುವ ಗ್ಯಾಂಗ್‌ನ ಸದಸ್ಯರಾಗಿದ್ದಾರೆ. ಗ್ಯಾಂಗ್‌ ನ ಇತರ ಸದಸ್ಯರ ಬಂಧನಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಬೆರ್ಹಾಂಪುರ ಎಸ್‌ಪಿ ಶರವಣ್ ವಿವೇಕ್ ಎಂ. ಸುದ್ದಿಸಂಸ್ಥೆಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News