ದಿನಕ್ಕೆ ನೂರು ರೂ. ಹೂಡಿಕೆ ಮಾಡಿದರೆ 35 ವರ್ಷಕ್ಕೆ 5 ಕೋಟಿ ವಾಪಸ್!

Update: 2024-09-25 15:16 GMT

ಸಾಂದರ್ಭಿಕ ಚಿತ್ರ 

ದಿನಕ್ಕೆ ನೂರೇ ನೂರು ರೂಪಾಯಿ ಹಾಕುತ್ತಾ ಹೋದರೂ ನಿವೃತ್ತಿಯಾಗುವಾಗ ಐದು ಕೋಟಿ ರೂಪಾಯಿ ಸಿಗುವ ಅವಕಾಶ ಮ್ಯೂಚುವಲ್ ಫಂಡ್ ಗಳಲ್ಲಿದೆ. ಪ್ರತಿದಿನ, ಪ್ರತಿವಾರ, ಪ್ರತಿ ತಿಂಗಳು ಹೊರಯಿಲ್ಲದಂತೆ ಸಣ್ಣ ಮೊತ್ತ ಕೂಡುತ್ತಾ ಹೋದರೆ ಇಳಿ ವಯಸ್ಸಿನಲ್ಲಿ ಯಾವುದೇ ತಲೆನೋವು ಇಲ್ಲದೇ ಜೀವನ ಮಾಡಬಹುದು.

ಇಲ್ಲಿ ಹೂಡಿಕೆಯ ಕಷ್ಟ ಕಾಣುವುದಿಲ್ಲ. ಆದರೆ ಆದಾಯದ ಮಾತ್ರ ಖಚಿತ. ಈ SIP ಹೂಡಿಕೆಯಲ್ಲಿ ನಷ್ಟದ ಭಯವೂ ಇರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್ಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಎಸ್ಐಪಿ ಹೆಚ್ಚು ಜನಪ್ರಿಯವಾಗುತ್ತಿದೆ. ಒಮ್ಮೆಲೇ ದೊಡ್ಡ ಮೊತ್ತ ಹೂಡಿಕೆ ಮಾಡುವ ಬದಲು ನಿಯಮಿತವಾಗಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ. ಹಾಗಾಗಿ ನಿಯಮಿತ ಆದಾಯ ಇರುವವರು ಇದನ್ನೇ ಹೆಚ್ಚಾಗಿ ಆಯ್ದುಕೊಳ್ಳುವುದು ಎಸ್ಐಪಿ ಜನಪ್ರಿಯತೆಗೆ ಕಾರಣ.

ಬಹಳ ಬೇಗ ಹೂಡಿಕೆ ಶುರು ಮಾಡುವುದು, ಕಡಿಮೆ ಮೊತ್ತವೇ ಆದರೂ ನಿಯಮಿತ ಹೂಡಿಕೆ ನಿವೃತ್ತಿ ಕಾಲಕ್ಕೆ ಕೈಹಿಡಿಯುತ್ತದೆ ಎಂಬುದೊಂದು ಭರವಸೆ. ದಿನಕ್ಕೆ 100 ರೂ ಗಳೇ ಆದರೂ ಬಹಳ ಆರಂಭದಿಂದಲೇ SIP ನಲ್ಲಿ ಹೂಡಿಕೆ ಶುರು ಮಾಡಿದರೆ ದೊಡ್ಡ ಪ್ರಯೋಜನ ಎಂಬ ಲೆಕ್ಕಾಚಾರದ ಪ್ರಕಾರ, ನಿವೃತ್ತಿ ಹೊತ್ತಿಗೆ 5 ಕೋಟಿವರೆಗೂ ಮೊತ್ತ ಸೇರುವುದು ಸಾಧ್ಯವಿದೆ.

ಹೂಡಿಕೆ ಮಾಡಿದ ಹಣ ದೀರ್ಘ ಅವಧಿಯಲ್ಲಿ ದೊಡ್ಡ ಮೊತ್ತವಾಗಿ ಬೆಳೆಯುತ್ತದೆ ಎಂಬುದು ಮ್ಯೂಚುವಲ್ ಫಂಡ್ಗಳ ವಿಚಾರಕ್ಕೆ ಕೂಡ ಅನ್ವಯಿಸುತ್ತದೆ. ಮ್ಯೂಚುವಲ್ ಫಂಡ್ ನ ಉತ್ತಮ ಅಂಶವೇ SIP, ಅಂದರೆ ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಹೂಡಿಕೆಗೆ ಅವಕಾಶವಿರುವುದು.ಪ್ರತಿ ತಿಂಗಳು ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗುವ ವ್ಯವಸ್ಥೆಯೊಂದಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು SIP ಅನುಕೂಲಕರ ಮಾರ್ಗ ಎನ್ನುತ್ತದೆ, financial express ನ ಒಂದು ವರದಿ.

ಹೂಡಿಕೆಯ SIP ವಿಧಾನ ಭಾರತದ ಮ್ಯೂಚುವಲ್ ಫಂಡ್ ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದು ದೇಶದ ಈಕ್ವಿಟಿ ಮಾರುಕಟ್ಟೆಗಳಲ್ಲಿ ಗಮನಾರ್ಹ ಬೆಳವಣಿಗೆಗೆ ಕಾರಣವಾಗಿದೆ. SIP ವಿಧಾನ ದೀರ್ಘಾವಧಿ ಹೂಡಿಕೆಯನ್ನು ಹೆಚ್ಚು ಶಿಸ್ತುಬದ್ಧವಾಗಿಸುತ್ತದೆ ಮತ್ತು ಹೂಡಿಕೆಯ ಕಷ್ಟ ಕಾಣದಂತೆ ಸರಳಗೊಳಿಸುತ್ತದೆ.

ನಿಗದಿತ ಅವಧಿಗೆ ನಿಗದಿತ ಮೊತ್ತಕ್ಕೆ ಬದ್ಧವಾಗಿದ್ದು, ಮಾರುಕಟ್ಟೆಯ ಪರಿಸ್ಥಿತಿಗಳ ಪರಿಣಾಮ ಆಗುವುದಿಲ್ಲವಾದ್ದರಿಂದ SIP ನಲ್ಲಿ ನಷ್ಟದ ಭಯವಿಲ್ಲ ಎಂಬುದು ಮುಖ್ಯ ವಿಚಾರ. ದೀರ್ಘಾವಧಿಯವರೆಗೆ SIP ಮಾಡುವುದರಿಂದ ಸಂಯೋಜನೆಯ ಶಕ್ತಿಯ ಮೂಲಕ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ.

ಸರಳವಾಗಿ ಹೇಳುವುದಾದರೆ, ಹೂಡಿಕೆ ಹೊತ್ತಿನಲ್ಲಿ ಗಳಿಸುವ ಬಡ್ಡಿ ಅಥವಾ ಆದಾಯವನ್ನು ಮೂಲ ಕಾರ್ಪಸ್‌ಗೆ ಮರುಹೂಡಿಕೆ ಮಾಡಿದಾಗ ಅಂತಿಮ ಮೊತ್ತ ಇನ್ನಷ್ಟು ಹೆಚ್ಚುವುದು ಸಾಧ್ಯವಾಗುತ್ತದೆ. SIP ಲೆಕ್ಕಾಚಾರದಂತೆ, ನೌಕರಿಗೆ ಸೇರಿದ ಶುರುವಿನಲ್ಲಿಯೇ ಅಂದರೆ ಸುಮಾರು 25ನೇ ವಯಸ್ಸಿನಲ್ಲಿಯೇ ದಿನಕ್ಕೆ 100 ರೂ ನಂತೆ ತಿಂಗಳಿಗೆ 3,000 ರೂ ಹೂಡಿಕೆ ಶುರು ಮಾಡಿದರೆ, 35 ವರ್ಷಗಳ ಬಳಿಕ ಅಂದರೆ, ನಿವೃತ್ತಿಯಾಗುವ ಹೊತ್ತಿನಲ್ಲಿ 5 ಕೋಟಿ ರೂ ಗಳಷ್ಟು ನಿವೃತ್ತಿ ಕಾರ್ಪಸ್ ಸಂಗ್ರಹವಾಗುತ್ತದೆ.

25ನೇ ವಯಸ್ಸಿನಿಂದ ಹೂಡಿಕೆ ಶುರು ಮಾಡಿ 35 ವರ್ಷಗಳ ವರೆಗೆ SIP ನಲ್ಲಿ ತಿಂಗಳಿಗೆ 3,000 ರೂ ಗಳಂತೆ ಹೂಡಿಕೆಯ ಶಿಸ್ತನ್ನು ಪಾಲಿಸಿದರೆ 60ನೇ ವಯಸ್ಸಿನಲ್ಲಿ ನೆಮ್ಮದಿಯ ನಿವೃತ್ತಿ ಬದುಕಿಗೆ ಭದ್ರ ನೆಲೆಯಾಗುತ್ತದೆ.

►ಲೆಕ್ಕಾಚಾರ ಹೀಗಿದೆ:

ಆರಂಭಿಕ ಹೂಡಿಕೆ: ತಿಂಗಳಿಗೆ ರೂ 3,000 (ದಿನಕ್ಕೆ ರೂ 100)

ಹೂಡಿಕೆಯ ಅವಧಿ: 35 ವರ್ಷಗಳು (25ನೇ ವರ್ಷದಿಂದ ರಿಂದ 60 ವರ್ಷದವರೆಗೆ )

ನಿರೀಕ್ಷಿತ ವಾರ್ಷಿಕ ಆದಾಯ: 12%

ಒಟ್ಟು ಹೂಡಿಕೆ: ರೂ 3,000 x 12 ತಿಂಗಳುಗಳು x 35 ವರ್ಷಗಳು = ರೂ 97,56,877

ಹೂಡಿಕೆಯ ಮೇಲೆ ಅಂದಾಜು ಆದಾಯ: ರೂ 4,35,43,942

35 ವರ್ಷಗಳ ನಂತರ ಒಟ್ಟು ಕಾರ್ಪಸ್: ರೂ 5,33,00,819

ಹೂಡಿಕೆಯ ಹೊತ್ತಿನಲ್ಲಿ ವರ್ಷವೂ ನಿಮ್ಮ ಹೂಡಿಕೆಯನ್ನು ಶೇ.10ರಷ್ಟು ಹೆಚ್ಚಿಸಿದರೆ ಗಮನಾರ್ಹ ಆರ್ಥಿಕ ಬೆಳವಣಿಗೆ ಸಾಧ್ಯ ಎಂಬ ಭರವಸೆಯೂ ಈ ಯೋಜನೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News