ಆಯುಷ್ಮಾನ್‌ ಭಾರತ್‌ ಅಡಿ ನೋಂದಣಿಗೊಂಡ 27,000 ಆಸ್ಪತ್ರೆಗಳ ಪೈಕಿ 18,783 ಮಾತ್ರ ಸಕ್ರಿಯ: ವರದಿ

Update: 2023-07-26 14:08 GMT

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಎಂಪಾನೆಲ್‌ ಆಗಿರುವ ಮೂರನೇ ಒಂದಂಶದಷ್ಟು ಆಸ್ಪತ್ರೆಗಳು ನಿಷ್ಕ್ರಿಯವಾಗಿವೆ ಎಂದು ಅಧಿಕೃತ ಅಂಕಿಅಂಶಗಳನ್ನು ಆಧಾರವನ್ನಾಗಿಸಿ ವರದಿಯೊಂದು ಹೇಳಿದೆ.

ಸದ್ಯ ಈ ಯೋಜನೆಯಡಿ ಎಂಪಾನೆಲ್‌ ಆಗಿರುವ 27,000 ಆಸ್ಪತ್ರೆಗಳ ಪೈಕಿ 18,783 ಆಸ್ಪತ್ರೆಗಳು ಸಕ್ರಿಯವಾಗಿವೆ.

ಈ ಯೋಜನೆ ಜಾರಿಯಾದ 2018 ರಿಂದ 4,682 ಆಸ್ಪತ್ರೆಗಳು ನಿಷ್ಕ್ರಿಯವಾಗಿದ್ದವು ಹಾಗೂ ಈ ಆಸ್ಪತ್ರೆಗಳು ಒಂದೇ ಒಂದು ಫಲಾನುಭವಿ ರೋಗಿಗೆ ಚಿಕಿತ್ಸೆ ಒದಗಿಸಿಲ್ಲ. ಆದರೆ 3,632 ಆಸ್ಪತ್ರೆಗಳು ಕಳೆದ ಆರು ತಿಂಗಳಲ್ಲಿ ನಿಷ್ಕ್ರಿಯವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News