ಪಂಜಾಬ್ ನಲ್ಲಿ 3,000ಕ್ಕೂ ಹೆಚ್ಚು ಹುಲ್ಲುಸುಟ್ಟ ಘಟನೆಗಳ ವರದಿ; ಈವರೆಗಿನ ಅತ್ಯಧಿಕ ಪ್ರಮಾಣ
ಚಂಡೀಗಢ: ರವಿವಾರ ಪಂಜಾಬ್ ನಲ್ಲಿ 3,230 ಹೊಲಗಳಲ್ಲಿ ಹುಲ್ಲಿನ ಕೊಳೆಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದ್ದು, ಈ ಋತುವಿನಲ್ಲೇ ಇದು ಅತ್ಯಧಿಕ ಪ್ರಮಾಣವಾಗಿದೆ. ಈ ನಡುವೆ, ಹರ್ಯಾಣದಲ್ಲಿನ ಅಧಿಕ ಭಾಗಗಳಲ್ಲಿ ವಾಯು ಗುಣಮಟ್ವವು ‘ತೀರಾ ಕಳಪೆ’ ಮತ್ತು ‘ಗಂಭೀರ’ ವರ್ಗಗಳಲ್ಲಿ ದಾಖಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಂಜಾಬ್ ನಿಸ್ತಂತು ಸಂವೇದಿ ಕೇಂದ್ರದ ದತ್ತಾಂಶದ ಪ್ರಕಾರ, ಹೊಸದಾಗಿ 3,230 ಹುಲ್ಲುಗಳಿಗೆ ಬೆಂಕಿ ಹಚ್ಚಿದ ಘಟನೆಗಳೊಂದಿಗೆ, ಪಂಜಾಬ್ ನಲ್ಲಿ ಈ ಬಾರಿ ಕೂಳೆಗಳಿಗೆ ಬೆಂಕಿ ಹಚ್ಚಿರುವ ಘಟನೆಗಳ ಒಟ್ಟು ಪ್ರಮಾಣ 17,403ಕ್ಕೆ ತಲುಪಿದೆ ಎಂದು ಹೇಳಿದೆ.
ಈ ಋತುವಿನಲ್ಲಿ ವರದಿಯಾಗಿರುವ ಒಟ್ಟು ಉಳಿಕೆ ದಹನದ ಘಟನೆಗಳ ಪೈಕಿ ಶೇ. 56ರಷ್ಟು ಹೊಲಗಳಿಗೆ ಬೆಂಕಿ ಹಚ್ಚಿರುವ ಘಟನೆಗಳು ಸೇರಿವೆ ಎಂಬುದು ದತ್ತಾಂಶಗಳಿಂದ ವ್ಯಕ್ತವಾಗಿದೆ.
ಆದರೆ, ಸೆಪ್ಟೆಂಬರ್ 15ರಿಂದ ನವೆಂಬರ್ 15ರವರೆಗೆ ದಾಖಲಾಗಿರುವ ಉಳಿಕೆ ದಹನದ ಘಟನೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 41ರಷ್ಟು ಇಳಿಕೆಯಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 29,400 ಘಟನೆಗಳು ದಾಖಲಾಗಿದ್ದವು.
2021ನೇ ಸಾಲಿನಲ್ಲಿ ಪಂಜಾಬ್ ರಾಜ್ಯದಲ್ಲಿ 28,792 ಹೊಲಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದ್ದವು.
31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬೆಳೆಯುತ್ತಿರುವ ಪಂಜಾಬ್ ರಾಜ್ಯವು ಪ್ರತಿ ವರ್ಷ 180-200 ಲಕ್ಷ ಟನ್ ಗೋಧಿ ಕೂಳೆಯನ್ನು ಉತ್ಪಾದಿಸುತ್ತದೆ. ಈ ಪೈಕಿ, 120 ಲಕ್ಷ ಟನ್ ಕೂಳೆಯನ್ನು ಹೊಲದಲ್ಲೇ ಗೊಬ್ಬರವಾಗಿ ಮಿಶ್ರ ಮಾಡಿದರೆ, ಸುಮಾರು 30 ಲಕ್ಷ ಟನ್ ಕೂಳೆಯನ್ನು ಉರಿಸುವ ವಿಧಾನದ ಮೂಲಕ ಇಂಧನವಾಗಿ ಬಳಸಲಾಗುತ್ತದೆ.