ಜಾಮೀನು ಸಿಕ್ಕಿದ್ದಕ್ಕೆ ಸಂಭ್ರಮಾಚರಣೆ: ಮತ್ತೆ ಜೈಲುಪಾಲಾದ ಅಪ್ಪ-ಮಗ!

Update: 2024-12-29 10:58 GMT

ಸಾಂದರ್ಭಿಕ ಚಿತ್ರ

ಬುಲಂದ್ ಶಹರ್: ತಮಗೆ ಜಾಮೀನು ದೊರೆಯುತ್ತಿದ್ದಂತೆಯೆ, ಗುಂಡಿನ ತೋಪು ಉಡಾಯಿಸಿ ಭಾರಿ ಸಂಭ್ರಮಾಚರಣೆ ನಡೆಸಿದ್ದ ಬುಲಂದ್ ಶಹರ್ ನ ಅಪ್ಪ-ಮಗ ಜೋಡಿಯೊಂದು, ಮತ್ತೊಂದು ಪ್ರಕರಣದಲ್ಲಿ ಜೈಲುಪಾಲಾಗಿರುವ ಘಟನೆ ವರದಿಯಾಗಿದೆ. ಅವರಿಬ್ಬರನ್ನು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ಪ-ಮಗನನ್ನು ಬಂಧಿಸಿದ ವೇಳೆ ಪೊಲೀಸರು ವಾಹನದೊಂದಿಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಅವರಿಂದ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬುಲಂದ್ ಶಹರ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಮಿಶ್ರ, “ಆರೋಪಿಗಳಾದ ರಿಝ್ವಾನ್ ಅನ್ಸಾರಿ ಹಾಗೂ ಆತನ ಪುತ್ರ ಅದ್ನಾನ್ ನನ್ನು ಖುರ್ಜಾ ನಗರ ಪ್ರದೇಶದ ಶೇಖ್ ಸಾಹಿಬಾನ್ ಮೊಹಲ್ಲಾದಿಂದ ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಈ ಹಿಂದೆ ಅವರಿಬ್ಬರ ವಿರುದ್ಧ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು, ಡಿಸೆಂಬರ್ 26ರಂದು ರಿಝ್ವಾನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ” ಎಂದು ತಿಳಿಸಿದ್ದಾರೆ.

ಶಂಕಿತ ಆರೋಪಿಗಳ ವಾಹನದಿಂದ 10 ಜೀವಂತ ಕಾರ್ಟಿಡ್ಜ್ ಗಳೊಂದಿಗೆ ಐದು .315 ಬೋರ್ ಪಿಸ್ತೂಲ್ ಗಳು, ಆರು ಕಾರ್ಟ್ರಿಡ್ಜ್ ಗಳೊಂದಿಗೆ ಎರಡು 12 ಬೋರ್ ಪಿಸ್ತೂಲ್ ಗಳು ಹಾಗೂ ಆರು ಕಾರ್ಟ್ರಿಡ್ಜ್ ಗಳೊಂದಿಗೆ ಎರಡು .32 ಬೋರ್ ಪಿಸ್ತೂಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News