ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೊಕೇನ್ ಖರೀದಿಗೆ ಯತ್ನ ; ಆಸ್ಟ್ರೇಲಿಯದ ಹಾಕಿ ಆಟಗಾರನ ಅಮಾನತು
Update: 2024-09-11 14:25 GMT
ಸಿಡ್ನಿ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೊಕೇನ್ ಖರೀದಿಸಲು ಪ್ರಯತ್ನಿಸಿದ್ದಕ್ಕಾಗಿ ಫೀಲ್ಡ್ ಹಾಕಿ ಆಟಗಾರ ಟಾಮ್ ಕ್ರೆಗ್ ಅವರನ್ನು ಆಸ್ಟ್ರೇಲಿಯದ ಕ್ರೀಡಾ ಆಡಳಿತ ಮಂಡಳಿಯು 12 ತಿಂಗಳ ಕಾಲ ಅಮಾನತುಗೊಳಿಸಿದೆ.
ತನ್ನ ಒಲಿಂಪಿಕ್ಸ್ ಅಭಿಯಾನ ಮುಕ್ತಾಯಗೊಂಡ ನಂತರ ಆಗಸ್ಟ್ 7ರಂದು ರಾತ್ರಿ ಪ್ಯಾರಿಸ್‌ನಲ್ಲಿ ಡ್ರಗ್ ಖರೀದಿಸಲು ಯತ್ನಿಸಿದ ಟಾಮ್ ಕ್ರೆಗ್‌ರನ್ನು ಬಂಧಿಸಲಾಗಿತ್ತು. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಲಾಗಿತ್ತು.
ಪ್ಯಾರಿಸ್‌ನಲ್ಲಿ ನಡೆದಿದ್ದ 2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಪುರುಷರ ಹಾಕಿ ತಂಡದ ಅತ್ಲೀಟ್ ಟಾಮ್ ಕ್ರೆಗ್ ಅವರನ್ನು ಬಂಧಿಸಿ ತನಿಖೆ ನಡೆಸಿದ ನಂತರ ಹಾಕಿ ಆಸ್ಟ್ರೇಲಿಯದ ಏಕೀಕೃತ ಘಟಕವು 12 ತಿಂಗಳ ಕಾಲ ಅಮಾನತುಗೊಳಿಸಿದೆ ಎಂದು ಹಾಕಿ ಆಸ್ಟ್ರೇಲಿಯ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.